ಚಿತ್ರದುರ್ಗ : ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಎಸ್‍ಜೆಎಂ ದಂತ ವೈದ್ಯಕೀಯ ಕಾಲೇಜು, ಅಭ್ಯುದಯ ಸೇವಾ ಸಂಸ್ಥೆ ಸಲವಮ್ಮನಹಳ್ಳಿ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸೆ, ಮಸೂರ ಅಳವಡಿಕೆ, ದಂತ ತಪಾಸಣೆ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ಹಮ್ಮಿಕೊಳ್ಳಲಾಗಿದೆ.
ಹೊಳಲ್ಕೆರೆ ತಾಲೂಕಿನ ಗೂಳಿಹೊಸಹಳ್ಳಿ ಸರ್ಕಾರಿ ಆಯುರ್ವೇದ ಕೇಂದ್ರ, ಉಪ್ಪರಿಗೇನಹಳ್ಳಿ ಗ್ರಾಪಂ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗೂಳಿಹೊಸಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಮೇ.11 ಬುಧವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಶಿಬಿರ ನಡೆಯಲಿದೆ ಎಂದು ಅಭ್ಯುದಯ ಸೇವಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರೊ.ಸಲವಮ್ಮನಹಳ್ಳಿ ಸಿದ್ದೇಶ್‍ಗೌಡ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇತ್ರ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರರನ್ನು ಚಿತ್ರದುರ್ಗಕ್ಕೆ ಕರೆದೊಯ್ದು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಲಭ್ಯವಿರುವ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಶಿಬಿರದಲ್ಲಿ ಚರ್ಮರೋಗ, ಮಾನಸಿಕ ರೋಗ, ಸ್ತ್ರೀ ರೋಗ, ಕಿವಿ, ಮೂಗು, ಗಂಟಲು, ಮೂಳೆ ತಜ್ಞರು, ಪಿಜಿಷಿಯನ್‍ಗಳು ಲಭ್ಯರಿರುತ್ತಾರೆ.