ಚಿಕ್ಕಬಳ್ಳಾಪುರ: ನಂದಿಬೆಟ್ಟ ಎಲ್ಲರ ನೆಚ್ಚಿನ ಪ್ರವಾಸಿ ತಾಣ. ಟ್ರಿಪ್ ಹೋಗೋಣಾ ಎಂದಾಗ ಮೊದಲು ನೆನಪಿಗೆ ಬರೋದೆ ನಂದಿಬೆಟ್ಟ. ಆದ್ರೆ ಭಾರೀ ಮಳೆಗೆ ನಂದಿಬೆಟ್ಟದ ಹಾದಿ ಕುಸಿದು, ಪ್ರವಾಸಿಗರಿಗೆ ಬಾಗಿಲು ಹಾಕಿತ್ತು. ಇದೀಗ ಜಿಲ್ಲಾಡಳಿತ ರಸ್ತೆ ಸರಿ ಮಾಡಿಸಿದ್ದು, ಪ್ರವಾಸಿಗರಿಗೆ ಮುಕ್ತ ಅವಕಾಶ ಸಿಕ್ಕಿದೆ.
ಈ ಮುಂಚೆಯೆಲ್ಲಾ ಫ್ಲ್ಯಾನದ ಮಾಡಿದಂತೆ ವೀಕೆಂಡ್ ನಲ್ಲಿ ಫ್ಲ್ಯಾನ್ ಮಾಡುವ ಆಗಿಲ್ಲ. ಯಾಕಂದ್ರೆ ವೀಕೆಂಡ್ ಅಂದ್ರೆ ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿದೆ. ಉಳಿದಂತೆ ಸೋಮವಾರದಿಂದ ಶುಕ್ರವಾರದವರೆಗೆ ನಂದಿಬೆಟ್ಟಕ್ಕೆ ಹೋಗಿ ಪ್ರಕೃತಿ ಸೌಂದರ್ಯವನ್ನ ಸವಿಯಬಹುದು.
ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಅವಾಂತರ ಸೃಷ್ಟಿಯಾಗಿತ್ತು. ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿತ್ತು. ಪರಿಣಾಮ ನಂದಿ ಬೆಟ್ಟಕ್ಕೆ ಹೋಗಿವ ದಾರಿ ಸಂಪೂರ್ಣವಾಗಿ ಮುಚ್ಚಿ ಹೋಗಿತ್ತು. ಅಂದಿನಿಂದ ಪ್ರವಾಸಿಗರಿಗೆ ನಂದಿಬೆಟ್ಟಕ್ಕೆ ಹೋಗಲು ಅವಕಾಶವಿರಲಿಲ್ಲ. ಈಗ ರಸ್ತೆ ಸರಿ ಮಾಡಿಸಿರುವ ಜಿಲ್ಲಾಡಳಿತ ಮುಕ್ತ ಅವಕಾಶ ನೀಡಿದೆ. ಸದ್ಯಕ್ಕೆ ವೀಕೆಂಡ್ ನಲ್ಲಿ ಅವಕಾಶ ನೀಡದೆ ಇದ್ದರೂ ಪ್ರವಾಸಿಗರ ಸಂಖ್ಯೆ ನೋಡಿಕೊಂಡು ಅವಕಾಶ ನೀಡಲಾಗುತ್ತೆ ಎಂದಿದ್ದಾರೆ.