Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಹೂವು ಬೆಳಗಾರರ ಪ್ರತಿಭಟನೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜು.17) :  ತೋಟದಲ್ಲಿ ಬೆಳೆಯುತ್ತಿರುವ ಹೂವಿನ ಬೆಳೆಗೆ ರೋಗ ಆವರಿಸಿದ್ದು ಇದನ್ನು ತಡೆಯಲು ಮಾಡಿದ ಹಲವಾರು ಕ್ರಮಗಳು ಸಹಾ ಸಹಕಾರ ಮಾಡಿಲ್ಲ ಇದನ್ನು ಪ್ರತಿಭಟಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಹೂವನ್ನು ಹಾಕಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಳೆಗಾರರು ಪ್ರತಿಭಟನೆಯನ್ನು ನಡೆಸಿದರು.

ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ಹೂವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಸುಮಾರು 4 ವರ್ಷದಿಂದ ಹೂವಿಗೆ ನುಸಿ ರೋಗದ ಬಾದೆಯು ಹೆಚ್ಚಾಗಿದ್ದು, ಯಾವುದೇ ಔಷಧಿ ಸಿಂಪಡಿಸಿದರೂ ನುಸಿ ರೋಗ ಹತೋಟಿಗೆ ಬರುತ್ತಿಲ್ಲ. ಅನೇಕ ಅಂಗಡಿಗಳಲ್ಲಿ ಬಯೋ ಕಂಪನಿ ಔಷಧಿಯನ್ನು ಮಾರಾಟ ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ರವರಿಗೆ ಸಾಕಷ್ಟು ಬಾರಿ ಗಮನಕ್ಕೆ ಬಂದಿದ್ದರೂ ಸಹ ಒಬ್ಬರ ಮೇಲೆ ಒಬ್ಬರು ಹೇಳಿಕೊಂಡು ಈ ಕಳಪೆ ಔಷಧಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಹೂವಿನ ಕೃಷಿಯನ್ನು ಒಂದು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು, ಅಲ್ಪಸ್ವಲ್ಪ ಅಚ್ಚುಕಟ್ಟು ಜಮೀನಿನಲ್ಲಿ ಹೂವಿನ ಕೃಷಿಯನ್ನು ಮಾಡುತ್ತಿದ್ದು, ದಿನನಿತ್ಯ ಮನೆ ಖರ್ಚಿಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೂಗಳನ್ನು ಬೆಳೆಯುತ್ತಿದ್ದು ಈ ಐದಾರು ವರ್ಷಗಳಿಂದ ನುಸಿಹುಳು ಹೆಚ್ಚಾಗಿದ್ದು, ಹೂಗಳನ್ನು ತಿಂದು ಹಾಕುತ್ತಿದ್ದು ತೋಟಗಾರಿಕೆ ಇಲಾಖೆಯವರಿಗೂ ಹಾಗೂ ಕೃಷಿಇಲಾಖೆಯವರಿಗೂ ಮನವಿ ಮಾಡಿದ್ದರೂ ಸಹ ರೈತರ ತೋಟಕ್ಕೆ ಬಂದು ಯಾವುದೇ ರೀತಿ ರೈತರಿಗೆ ಸಲಹೆ ನೀಡಿರುವುದಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಕೃಷಿ ಇಲಾಖೆ ಇದೆಯೋ ಇಲ್ಲವೆಂಬುದು ರೈತರಿಗೆ ಗೊತ್ತಾಗಬೇಕು. ನುಸಿಹುಳು ರೈತರ ಬದುಕನ್ನು ನುಂಗಿಹಾಕುತ್ತಿದೆ. ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್ ಬಾಬು, ತಾಲ್ಲೂಕು ಅಧ್ಯಕ್ಷ ಧನಂಜಯ, ಮುಖಂಡರಾದ ಭೂತಯ್ಯ, ಮಂಜಪ್ಪ ಶಿವನಕೆರೆ, ಸಿ.ನಾಗರಾಜು ಮುದ್ದಾಪುರ, ಎಸ್.ಟಿ.ಚಂದ್ರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಕ್ಲಹಳ್ಳಿ ರವಿಕುಮಾರ್, ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಎಂ.ಬಿ.ತಿಪ್ಪೇಸ್ವಾಮಿ ಕಾಂತರಾಜು, ಮೂರ್ತಿ, ಮಹಂತಣ್ಣ, ಶಾಂತಣ್ಣ, ಮಲ್ಲಿಕಾರ್ಜನ ನಾಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರಿಗೆ ಅಷ್ಠಮ ಸ್ಥಾನದ ಶನಿಯಿಂದ ದಂಪತಿಗಳಿಗೆ ಕುಟುಂಬ ಕಲಹ, ಹಣಕಾಸಿನ ತೊಂದರೆ

ಈ ರಾಶಿಯವರಿಗೆ ಅಷ್ಠಮ ಸ್ಥಾನದ ಶನಿಯಿಂದ ದಂಪತಿಗಳಿಗೆ ಕುಟುಂಬ ಕಲಹ, ಹಣಕಾಸಿನ ತೊಂದರೆ, ಉದ್ಯೋಗದಲ್ಲಿ ಕಿರಿ ಕಿರಿ, ಪ್ರೇಮಿಗಳಿಗೆ ವಿರಸ, ಶನಿವಾರ- ರಾಶಿ ಭವಿಷ್ಯ ಜುಲೈ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:50 ಶಾಲಿವಾಹನ

30 ವರ್ಷದಿಂದ ಸೀರೆಯನ್ನೇ ತೆಗೆದುಕೊಳ್ತಿಲ್ಲ : ಸರಳತೆಯಿಂದಾನೇ ಮತ್ತೆ ಮನಸ್ಸು ಗೆದ್ದ ಸುಧಾಮೂರ್ತಿ, ಹೇಳಿದ್ದೇನು..?

ಬೆಂಗಳೂರು: ಸುಧಾಮೂರ್ತಿ ಅಂದ್ರೆ ಸರಳತೆಯಿಂದಾನೇ ಯುವಕರಿಗೆ ಸ್ಪೂರ್ತಿಯಾದವರು. ಅವರ ನಡವಳಿಕೆ, ಅವರ ಮಾತುಗಳು ಎಲ್ಲರನ್ನು ಆಕರ್ಷಿಸುತ್ತದೆ. ಕೋಟ್ಯಾಧೀಶ್ವರರೇ ಆದರು ಸಿಂಪಲ್ ಆಗಿ ಇರುವುದಕ್ಕೆ ಇಷ್ಟ ಪಡುತ್ತಾರೆ. ಇದೀಗ ಕಳೆದ 30 ವರ್ಷದಿಂದ ಸೀರೆಯನ್ನೇ ಕೊಂಡುಕೊಂಡಿಲ್ಲ

ಇತಿಹಾಸ ನಿರ್ಮಿಸಿದ ಬಜಾಜ್; ವಿಶ್ವದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಭಾರತೀಯ ಕಂಪನಿ; ಮೈಲೇಜ್ ಕೂಡ ಸೂಪರ್

• ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆಗೆ ಕೊನೆಗೂ ತೆರೆ ಬಿದ್ದಿದೆ. ಭಾರತೀಯ ಆಟೋಮೊಬೈಲ್ ಕಂಪನಿ ಬಜಾಜ್ ಶುಕ್ರವಾರ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ

error: Content is protected !!