ಬೆಂಗಳೂರು: ಪೊಲೀಸರು ಅಂದ್ರೆ ಫಿಟ್ ಆಂಡ್ ಫೈನ್ ಆಗಿರ್ಬೇಕು ಅನ್ನೋ ನಿಯಮ ಇದೆ. ಆದ್ರೆ ಸುಮಾರು ಜನ ಹೊಟ್ಟೆ ಬೆಳೆಸಿಕೊಂಡಿರೋ ಪೊಲೀಸರು ಕಣ್ಣಿಗೆ ಬೀಳ್ತಾರೆ. ಇದೀಗ ಅವರೆಲ್ಲರಿಗೂ ADGP ಅಲೋಕ್ ಕುಮಾರ್ ವಾರ್ನಿಂಗ್ ಕೊಟ್ಟಿದ್ದಾರೆ.
ನಿಗಧಿತ ತೂಕಕ್ಕಿಂತ ಹೆಚ್ಚು ತೂಕ ಹೊಂದಿರುವವರಿಗೆ ಎಡಿಜಿಪಿ ಅಲೋಕ್ ಕುಮಾರ್ ಎರಡು ತಿಂಗಳ ಗಡುವು ನೀಡಿದ್ದಾರೆ. ಅಷ್ಟರೊಳಗೆ ಹೊಟ್ಟೆ ಕರಗಿಸಲು ಸೂಚಿಸಿದ್ದಾರೆ. ಒಂದು ವೇಳೆ ಹೊಟ್ಟೆ ಮುಂದಿದ್ದರೆ ಅತ್ಯುನ್ನತ ಪ್ರಶಸ್ತಿಗಳಿಗೆ ಶಿಫಾರಸ್ಸು ಮಾಡೋದಿಲ್ಲ ಎಂದಿದ್ದಾರೆ. ಎರಡು ತಿಂಗಳೊಳಗಾಗಿ ಹೊಟ್ಟೆ ಕರಗಿಸಲಿಲ್ಲ ಅಂದ್ರೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸೂಚಿಸಿದ್ದಾರೆ. ಎತ್ತರಕ್ಕೆ ತಕ್ಕಂತೆ ತೂಕ ಹೊಂದಿರಬೇಕು ಎಂದು ಸೂಚಿಸಿದ್ದಾರೆ.
ಈ ಸಂಬಂಧ ಮಾತನಾಡಿರೋ ಅಲೋಕ್ ಕುಮಾರ್, ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ಚು KSRP ಸಿಬ್ಬಂದಿಗಳಿದ್ದಾರೆ. ಅವರ ಆರೋಗ್ಯ ದೃಷ್ಟಿಯಿಂದ ಈ ರೀತಿಯ ಸೂಚನೆ ನೀಡಿದ್ದೇವೆ ಎಂದಿದ್ದಾರೆ. ಇದೀಗ ಅಲೋಕ್ ಕುಮಾರ್ ಸೂಚನೆ ಮೇರೆಗೆ ತೂಕ ಹೆಚ್ಚಿರುವ ಸಿಬ್ಬಂದಿಗಳು ಮೈದಾನಕ್ಕಿಳಿದು ತೂಕ ಕಡಿಮೆ ಮಾಡಿಕೊಳ್ಳುವತ್ತ ಗಮನ ಹರಿಸಿದ್ದಾರೆ. ದೇಹ ದಂಡಿಸುತ್ತಿದ್ದಾರೆ.