ಮಂಡ್ಯ: ಕೊರೊನಾ ಸಂಕಷ್ಟದಿಂದ ಕೆಲವೊಂದು ಧಾರ್ಮಿಕ ಪದ್ಧತಿಗಳಿಗೂ ಬ್ರೇಕ್ ಬಿದ್ದಿದೆ. ಕೊರೊನಾ ನಿಯಂತ್ರಿಸೋಕೆ ರಾಜ್ಯ ಸರ್ಕಾರ ಈಗಾಗ್ಲೇ ಟಫ್ ರೂಲ್ಸ್ ಜಾರಿ ಮಾಡಿದ್ದು, ಜೊತೆಗೆ ವೀಕೆಂಡ್ ಲಾಕ್ಡೌನ್ ಹೇರಿದೆ.
ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನ ದೇವಾಲಯದಲ್ಲಿ ನಡೆಯಬೇಕಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ವೀಕೆಂಡ್ ಕರ್ಫ್ಯೂ ಅಡ್ಡಿಯುಂಟು ಮಾಡಿದೆ. ಸಂಕ್ರಾಂತಿಯಂದು ನಡೆಯಬೇಕಿದ್ದ ಈ ದೀಪೋತ್ಸವ ಕಾರ್ಯಕ್ರಮ ವೀಕೆಂಡ್ ಕರ್ಫ್ಯೂ ಹಿನ್ನೆಲೆ ರದ್ದಾಗಿದೆ.
ಸಂಕ್ರಾಂತಿ ಹಬ್ಬದಂದು ಇಲ್ಲಿ ದೀಪೋತ್ಸವ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿತ್ತು. ಈ ದೀಪೋತ್ಸವ ಕಾರ್ಯಕ್ರಮಕ್ಕೆ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಿದ್ದರು. ಆದ್ರೆ ವೀಕೆಂಡ್ ಕರ್ಫ್ಯೂ ಹಿನ್ನೆಲೆ ದೇವಸ್ಥಾನದಲ್ಲಿ ಅದ್ದೂರಿ ಪೂಜೆಗೆ, ಹೆಚ್ಚು ಭಕ್ತರಿಗೆ ಅವಕಾಶ ನೀಡಿಲ್ಲ. ಸರಳವಾಗಿ ಸಾವಿರ ದೀಪಗಳನ್ನ ಹಚ್ಚಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ. ಇನ್ನು ಭಕ್ತರೆಲ್ಲಾ ದೇವಸ್ಥಾನದ ಹೊರಗಿನ ಆವರಣದಲ್ಲೇ ಪೂಜೆ ಸಲ್ಲಿಸಿ ವಾಪಾಸ್ ಆಗಿದ್ದಾರೆ. ದೇವಸ್ಥಾನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ರದ್ದಾಗಿದೆ.