ಮಂಡ್ಯ: ರೈತರು ಬೆಳೆದ ಕಬ್ಬಿನ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಅನ್ನೋ ನೋವು ರೈತರನ್ನ ಕಾಡುತ್ತಿದೆ. ಹೀಗಾಗಿ ರೈತರು ಸಿಎಂ ಮುಂದೆ ಈ ವುಚಾರ ಇಡಲು ನಿರ್ಧರಿಸಿದ್ದಾರೆ. ಪ್ರತಿಭಟಿಸಿಯೋ ಕೇಳೋ ಆಲೋಚನೆ ಮಾಡಿದ್ದಾರೆ. ಈ ಹಿನ್ನೆಲೆ ಸಿಎಂ ಜಿಲ್ಲೆಗೆ ಬಂದಾಗ ಮುತ್ತಿಗೆ ಹಾಕಲು ರೆಡಿಯಾಗಿದ್ದಾರೆ.
ಉತ್ತಮ ಮಳೆಯಿಂದಾಗಿ ರಾಜ್ಯದ ಜಲಾಶಯಗಳು ಭರ್ತಿಯಾಗಿವೆ. ಕೆಆರ್ಎಸ್ ಡ್ಯಾಮ್ ಕೂಡ ತುಂಬಿದ್ದು, ಜಲಾಶಯಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಯೂ ನಡೆದಿದೆ.
ಸಚಿವ ಕೆ ಸಿ ನಾರಾಯಣಸ್ವಾಮಿ ಜಲಾಶಯದ ಬಳಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರ ಬಳಿ ಭದ್ರತೆ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ಈ ಬೆನ್ನಲ್ಲೆ ರೈತರು ಕಬ್ಬಿಗೆ ಒಂದು ಟನ್ ಗೆ 4,500 ರೂಪಾಯಿ ನಿಗದಿ ಪಡಿಸುವಂತೆ ಸಿಎಂ ಬಂದಾಗ ಕೆಆರ್ಎಸ್ ಬಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.