RCB ಅಭಿಮಾನಿಗಳು ಕಡೆಯ ತನಕ ತಮ್ಮ ಟೀಂ ಬಗ್ಗೆ ಹೋಪ್ ಕಳೆದುಕೊಳ್ಳುವುದೇ ಇಲ್ಲ. ಯಾಕಂದ್ರೆ ಆರ್ಸಿಬಿ ಆಟಗಾರರು ಸಹ ಅದೇ ಥರ ಕೊನೆಯಲ್ಲಿ ಚೋಕ್ ಕೊಡ್ತಾರೆ. ಈ ಬಾರಿಯ ಐಪಿಎಲ್ ನಲ್ಲಿ ಆರಂಭದ ಅಷ್ಟು ಪಂದ್ಯಗಳನ್ನು ಸೋತು ಅಭಿಮಾನಿಗಳ ಮನಸ್ಸಿಗೆ ಬೇಸರ ಮಾಡಿದ್ದರು. ಪ್ಲೇ ಕನಸ್ಸನ್ನು ನುಚ್ಚು ನೂರು ಮಾಡಿದ್ದರು. ಆದರೆ ಆಮೇಲೆ ನಿಜವಾದ ಆಟ ಶುರು ಮಾಡಿದರು ನೋಡಿ. ಆಡಿದ ಒಂದೇ ಒಂದು ಪಂದ್ಯವನ್ನು ಬಿಟ್ಟಿಲ್ಲ. ಇದೀಗ ಪ್ಲೇ ಆಫ್ ಹೋಗುವುದಕ್ಕೆ ಇನ್ನು ಒಂದು ಪಂದ್ಯ ಗೆಲ್ಲಲೇಬೇಕು.
ನಾಳೆ ಅಂದ್ರೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವಿದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿಗಳು ಅಂತ ಹೆಸರಾಗಿರುವ ಸಿ ಎಸ್ ಕೆ ಎದುರು ಆರ್ಸಿಬಿ ಸೆಣೆಸಾಡಲಿದೆ. ಪ್ಲೇ ಆಫ್ ಕನಸು ನನಸಾಗುವುದಕ್ಕೆ ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಅಭಿಮಾನಿಗಳ ಎದೆಯಲ್ಲೂ ಢವ ಢವ ಎನ್ನುತ್ತಿದೆ. ಹೇಗಾದರೂ ಮಾಡಿ ಆರ್ಸಿಬಿ ಗೆಲ್ಲಲೇಬೇಕೆಂದು ಪ್ರಾರ್ಥನೆ ಮಾಡತೊಡಗಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯದೆಲ್ಲೆಡೆ ಮಳೆ ಜೋರಾಗಿದೆ. ಇನ್ನು ಒಂದು ವಾರಗಳ ಕಾಲ ಮಳೆ ಬರುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ನಾಳೆ ನಡೆಯುವ ಮ್ಯಾಚ್ ಗೆ ಮಳೆ ಅಡ್ಡಿಯಾಗಿ ಬಿಡುತ್ತಾ ಎಂಬ ಭಯ ಅಭಿಮಾನಿಗಳದ್ದು. ಈಗಾಗಲೇ ಎರಡು ಮ್ಯಾಚ್ ನಲ್ಲೂ ಮಳೆಯ ಭಯ ಇತ್ತು. ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮ್ಯಾಚ್ ಗೂ ವರುಣನೇ ಕೃಪೆ ತೋರಬೇಕು ಎಂದು ಫ್ಯಾನ್ಸ್ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಬಸವನಗುಡಿಯ ದೊಡ್ಡಗಣಪತಿ ದೇವಾಲಯ ಹಾಗೂ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗುತ್ತಿದೆ. ಆರ್ಸಿಬಿ ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಕೆಯಾಗಿದೆ.