ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ನಾಳೆಯಿಂದ ಶುರುವಾಗಲಿದೆ. ಈ ಬಗ್ಗೆ ಮಾಜಿ ಸಚಿವೆ, ನಟಿ ಉಮಾಶ್ರೀ ಮಾತನಾಡಿದ್ದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಕುಡಿಯುವ ನೀರಿಗಾಗಿ ನಮ್ಮ ಹೋರಾಟ ನಡೆಯುತ್ತಿರುವುದು. ನಾಳೆಯಿಂದ ಪಾದಯಾತ್ರೆ ನಡೆಯಲಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅನೇಕ ವರ್ಷಗಳ ಪ್ರಯತ್ನವಿದು. ಕೊನೆಯ ಹಂತಕ್ಕೆ ಬಂದು ನಿಂತಿದೆ. ನಾಳೆ ಪಾಯಾತ್ರೆ ಆರಂಭವಾಗಲಿದೆ.
ಜನಪರ ಕಾರ್ಯಕ್ರಮವಿದು. ಎಲ್ಲರು ಈ ಹೋರಾಟದಲ್ಲಿ ಕೈ ಜೋಡಿಸಬೇಕು. ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಏನೇ ಷಡ್ಯಂತ್ರ ಮಾಡಿದ್ರು ನಮ್ಮ ಹೋರಾಟ ಮಾತ್ರ ನಿಲ್ಲಲ್ಲ. ಯಾಕೇ ನಮಗೆ ಮಾತ್ರ ಕೊರೊನಾ ಬರೋದಾ..? ಕೊರೊನಾ ಇದ್ದರು ಪ್ರಧಾನಿ ರ್ಯಾಲಿ ಮಾಡಬಹುದು..? ಅಮಿತ್ ಶಾ ರ್ಯಾಲಿ ಮಾಡಬಹುದು..? ನಾವೂ ಪಾದಯಾತ್ರೆ ಮಾಡುವ ಹಾಗಿಲ್ಲವ ಎಂದು ಪ್ರಶ್ನಿಸಿದ್ದಾರೆ.
ಇನ್ನು ಜನರು ಪಾದಯಾತ್ರೆ ಪರವಾಗಿರುವುದು ಬಿಜೆಪಿಗೆ ಆತಂಕ ಶುರು ಮಾಡಿದೆ. ಕಾಂಗ್ರೆಸ್ ಯಶಸ್ಸು ಸಿಗುತ್ತೆ ಅಂತ ಬಿಜೆಪಿಗೆ ಭಯ ಶುರುವಾಗಿದೆ. ಕಾಂಗ್ರೆಸ್ ಒಂದು ತಿಂಗಳ ಹಿಂದೆಯೇ ಹೇಳಿಕೊಂಡು ಬಂದಿದೆ. ಪಾದಯಾತ್ರೆ ಮಾಡುವ ಬಗ್ಗೆ. ವೀಕೆಂಡ್ ಕರ್ಫ್ಯೂ ಮಾಡಿರೋದು ಷಡ್ಯಂತ್ರ ಅನ್ನೋದು ಇದರಲ್ಲೇ ಗೊತ್ತಾಗುತ್ತೆ ಎಂದು ಆಕ್ರೋಶ ಹೊರ ಹಾಕಿದ್ರು.