ಮೈಸೂರು; ಮೂಡಾ ಕೇಸ್ ಹಗರಣದಲ್ಲಿ ಸದ್ಯ ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಕ್ಕಿದೆ. ಆದರೆ ದೂರುದಾರ ಸ್ನೇಹಮಯಿ ಕೃಷ್ಣ ಮಾತ್ರ ಆ ಕೇಸನ್ನ ಇನ್ನು ಬಿಡ್ತಾ ಇಲ್ಲ. ಈಗಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಕೊಡಿಸದೆ ಬಿಡೋದಿಲ್ಲ ಅಂತ ಹೇಳ್ತಾ ಇದಾರೆ. ಈ ಬಗ್ಗೆ ಮತ್ತೆ ಮಾತನಾಡಿರುವ ಸ್ನೇಹಮಯಿ ಕೃಷ್ಣ, ಒಂದೇ ಕೈನಲ್ಲಿ ಚಪ್ಪಾಳೆ ಹೊಡೆಯೋಕೆ ಆಗಲ್ಲ. ಈ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಅಪರಾಧ ಕೃತ್ಯ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದಿದ್ದಾರೆ.
ಈ ಕ್ರಯಪತ್ರಕ್ಕೆ, ಈ ದಾಖಲೆಗೆ ಯಾರೂ ಸಹಿ ಮಾಡಿದ್ದಾರೆ. ಅಧಿಕಾರಿ ತಪ್ಪು ಮಾಡಿರೋದು ಯಾಕೆ. ಅರ್ಜಿ ಕೊಟ್ಟಿದ್ದಕ್ಕೆ ತಾನೇ. ನೊಂದವರು ನನ್ನ ಹಿಂದೆ ಇದ್ದಾರೆ, ಸೈನಿಕರಿಗೆ ನಿವೇಶನ ಕೊಟ್ಟಿಲ್ಲ ಅವರೆಲ್ಲಾ ನನ್ನ ಹಿಂದೆ ಇದ್ದಾರೆ. ಬರೀ ಸಿದ್ದರಾಮಯ್ಯ ಅವರ ವಿಚಾರ ಅಲ್ಲ. ನಾನು ಕೊಟ್ಟ ಅರ್ಜಿಯಲ್ಲಿ ನಿವೇಶನದ ಬಗ್ಗೆ ಮೆನ್ಶನ್ ಮಾಡಿದ್ದೇನೆ. ಕಾಂಗ್ರೆಸ್ ನವರು ನೇರವಾಗಿ ಹೋರಾಟ ಮಾಡೋದಕ್ಕೆ ಆಗಲ್ಲ. ಅವರು ಪರೋಕ್ಷವಾಗಿ ಬೆಂಬಲ ಕೊಡ್ತಾ ಇದಾರೆ. ಹಲವು ದಾಖಲೆಗಳನ್ನ ಕಾಂಗ್ರೆಸ್ ಪಕ್ಷದ ಮುಖಂಡರೆ ನನಗೆ ತಂದುಕೊಟ್ಟಿದ್ದಾರೆ.
ವಕೀಲರನ್ನೇ ನಾನು ನೇಮಿಸಿಕೊಂಡಿಲ್ಲ. ನನಗೆ ಅಷ್ಟು ಜ್ಞಾನ ಇದೆ. ಹೀಗಾಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಾದವನ್ನ ನಾನೇ ಮಂಡಿಸಿದ್ದೀನಿ. ಆದರೆ ಹೈಕೋರ್ಟ್ ಗೆ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದ್ದ ಕಾರಣ ವಕೀಲರಿಗೆ ಮನವಿ ಮಾಡಿಕೊಳ್ಳುತ್ತಾ ಇದ್ದೀನಿ. ಮತ್ತೆ ತನಿಖೆ ಮಾಡಬೇಕು ಅಂತಾನೇ ಹೇಳೋದು. ತಾರ್ಕಿಕ ಅಂತ್ಯ ಕಾಣಿಸುವವರೆಗೂ ಈ ಹೋರಾಟ ನಿಲ್ಲಿಸೋದಿಲ್ಲ. ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಆಗುವಂತೆ ತಕರಾರು ಅರ್ಜಿಯನ್ನ ಸಿದ್ಧ ಮಾಡ್ತಾ ಇದ್ದೀನಿ ಎಂದಿದ್ದಾರೆ.
ಬೆಂಗಳೂರು, ಮಾ. 14: ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಕ್ಯಾಬಿನೆಟ್ ಉಪ ಸಮಿತಿ ವರದಿಯೇ ಇನ್ನೂ…
ಭಗವದ್ಗೀತೆಯಿಂದ ಕಲಿಯಬೇಕಾದ ವಿಷಯಗಳು ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಬಯಸುತ್ತಾನೆ. ಅದಕ್ಕಾಗಿ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾನೆ ಮತ್ತು ಶ್ರಮಿಸುತ್ತಾನೆ.…
ಈ ರಾಶಿಯವರಿಗೆ ಹಣಕಾಸಿನ ತೀವ್ರ ಅಡಚಣೆ, ಈ ರಾಶಿಯವರಿಗೆ ಕೆಲಸದಲ್ಲಿ ಅಭದ್ರತೆ, ಸಂಗಾತಿಯಿಂದ ಮೋಸ ಸಂಭವ, ಶುಕ್ರವಾರದ ರಾಶಿ ಭವಿಷ್ಯ…
ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…