ಕೊಡಗು ಜಿಲ್ಲೆಯ ಶಾಲಾ – ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 26 ರಿಂದ 14 ದಿನಗಳ ತನಕ ದಸರಾ ರಜೆ ಘೋಷಣೆ ಮಾಡಲಾಗಿದೆ. ಕೊಡಗು ಜಿಲ್ಲಾಡಳಿತ ರಜೆ ಘೋಷಿಸಿ ಆದೇಶ ಹೊರಡಿಸಿದೆ.
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಆದೇಶದ ಮೇರೆಗೆ ರಜೆ ಘೋಷಣೆ ಮಾಡಲಾಗಿದೆ. ನಾಡಹಬ್ಬ ದಸರಾ ಕಾರ್ಯಕ್ರಮಗಳು ಆರಂಭವಾಗಿದೆ. ಸೆಪ್ಟೆಂಬರ್ 26ರಿಂದ ಮೈಸೂರಿನಲ್ಲಿ ದಸರಾ ಆರಂಭವಾಗಲಿದೆ. ಅಕ್ಟೋಬರ್5 ರಂದು ಮಡಿಕೇರಿಯಲ್ಲಿ ದಸರಾ ಆರಂಭವಾಗಲಿದೆ.
ನಾಡಹಬ್ಬ ದಸರಾ ರಾಜ್ಯದ ಹಲವೆಡೆ ಅದ್ದೂರಿಯಾಗಿ ಮಾಡಲಾಗುತ್ತದೆ. ಅದರಲ್ಲಿ ಮಡಿಕೇರಿ ದಸರಾ ಕೂಡ ಖ್ಯಾತಿ ಪಡೆದಿದೆ. ಪ್ರತಿ ವರ್ಷ ಅದ್ಧೂರಿಯಾಗಿ ದಸರಾ ಮಾಡಲಾಗುತ್ತದೆ. ಈಗಾಗಲೇ ಮಡಿಕೇರಿ ದಸರಾಗೂ ತಯಾರಿ ನಡೆಯುತ್ತಿದೆ.