Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಣ ದ್ವಿಗುಣ : ಆಂಧ್ರ ಮೂಲದ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ರೂ.4.79 ಕೋಟಿ ಮೋಸ

Facebook
Twitter
Telegram
WhatsApp

ದಾವಣಗೆರೆ, ಆ.30 :  ಆಂಧ್ರಪ್ರದೇಶದ ಕರ್ನೂಲ್ ಸ್ಕಂದ ಶಾಪಿಂಗ್ ಮಾಲ್, ಓಲ್ಡ್ ಟಾಕೀಸ್ ವಿಳಾಸದ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕೋಡೆ ರಮಣಯ್ಯ ತಂದೆ ಕೋಡೆ ಶ್ರೀನಿವಾಸಲು ಇವರು ಈ ಪ್ರೈವೇಟ್ ಲಿಮಿಟೆಡ್‍ನಲ್ಲಿ ಠೇವಣಿ ಇಟ್ಟಲ್ಲಿ 60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂದು ನಂಬಿಸಿ 106 ಗ್ರಾಹಕರಿಂದ ರೂ.4,79,99,000 ಗಳನ್ನು ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಲಾಗಿದೆ ಎಂದು ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಗ್ರಾಮದ ರಮೇಶಪ್ಪ ಇವರು ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಿ ದಾವಣಗೆರೆ ಸಿಐಡಿ, ಸಿಐಯು ಘಟಕದಿಂದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಉಪಾಧೀಕ್ಷಕರಾದ ಮಾಲತೇಶ್ ಎನ್.ಕೂನಬೇವು ತಿಳಿಸಿದ್ದಾರೆ.

ರಮೇಶಪ್ಪನಿಗೆ ಪರಿಚಯಸ್ಥರಾದ ಟಿ.ವಿ.ಶೇಷಯ್ಯ ಮತ್ತು ಎಂ.ಏಳುಕೊಂಡಲು ಇವರು ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಹಣ ಠೇವಣಿ ಇಟ್ಟಲ್ಲಿ 60 ದಿನಗಳಲ್ಲಿ ಹಣ ದ್ವಿಗುಣವಾಗಲಿದೆ ಎಂದು ತಿಳಿಸಿ ಕಂಪನಿಯ ಙes ಬ್ಯಾಂಕ್ ಖಾತೆ 114563300000374 ಗೆ ಹಣ ವರ್ಗಾವಣೆ ಮಾಡಿದ್ದು 60 ದಿನಗಳ ನಚಿತರ ರಮೇಶಪ್ಪ ರೂ.1,96,000 ರೂ.ಗಳನ್ನು ವಾಪಸ್ ಪಡೆದಿದ್ದರು. ನಾನು ಇಟ್ಟ ಠೇವಣಿಗೆ ಬಾಂಡ್ ಪೇಪರ್ ಮೇಲೆ ಅಗ್ರಿಮೆಂಟ್ ಸಹ ನೀಡಿರುತ್ತಾರೆ. ಇದನ್ನು ನಂಬಿ ನಾನು ಸೇರಿದಂತೆ ಸ್ನೇಹಿತರಿಗೆ ಮತ್ತು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯಸ್ಥರಿಗೆ ತಿಳಿಸಿ ಒಟ್ಟು 106 ಜನರಿಂದ ರೂ. ರೂ.4,79,99,000 ಹೂಡಿಕೆ ಮಾಡಿಸಲಾಗಿತ್ತು. ಈ ಮೊತ್ತಕ್ಕೆ 60 ದಿನಗಳ ನಂತರ ಯಾವುದೇ ಹಣ ವಾಪಸ್ ನೀಡಿರುವುದಿಲ್ಲ. ಇದರಿಂದ ಇಷ್ಟು ಗ್ರಾಹಕರು ಕಂಪನಿಯನ್ನು ನಂಬಿ ಮೋಸ ಹೋಗಿರುತ್ತಾರೆ.

ಪ್ರಕರಣವು ಪ್ರಸ್ತುತ ದಾವಣಗೆರೆ ಸಿಐಡಿ, ಸಿಐಯು ಘಟಕದಲ್ಲಿ ತನಿಖೆ ನಡೆಯುತ್ತಿದ್ದು ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರುಗಳಲ್ಲಿ ಸ್ಥಿರ ಮತ್ತು ಚರ ಆಸ್ತಿಗಳನ್ನು ಮಾಡಿರುವುದಾಗಿ ತಿಳಿದು ಬಂದಿದ್ದು ಈ ಸಂಸ್ಥೆಯ ಹೆಸರಿನಲ್ಲಿ ಆಸ್ತಿ ಇದ್ದಲ್ಲಿ ಮಾಹಿತಿ ನೀಡಲು ಮತ್ತು ಕಂಪನಿಯಿಂದ ಮೋಸ ಹೋಗಿದ್ದಲ್ಲಿ 9480800192 ಗೆ ಮಾಹಿತಿ ನೀಡಲು ತಿಳಿಸಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬ್ಯಾಂಕ್‍ಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮದಾನ

ಚಿತ್ರದುರ್ಗ. ನ.21: ಸರ್ಕಾರ ಬಡವರಿಗಾಗಿ ರೂಪಿಸಿರುವ ಸಹಾಯಧನ ಹಾಗೂ ಸಾಲ ಸೌಲಭ್ಯದ ಸ್ಕೀಂಗಳನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕುಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಮುಂದುವರೆದರೆ

RCB ಮುಂದಿನ ಕ್ಯಾಪ್ಟನ್ ಆಗಲಿದ್ದಾರಾ ರಜತ್ ಪಾಟಿದಾರ್..?

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಈಗಾಗಲೇ ಎಲ್ಲರಲ್ಲೂ ಕುತೂಹಲ ಕೆರಳಿದೆ. ಬಿಸಿಸಿಐ ಕೂಡ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ನವೆಂಬರ್ 24 ಮತ್ತು 25ರಂದು ಮೆಗಾ ಹರಾಜು ಕೂಡ ನಡೆಯಲಿದೆ. ಅದಕ್ಕೆ ಉಳಿದಿರುವುದು

ರೈತರ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಕಸಿಯಲು ಬಿಡುವುದಿಲ್ಲ : ಬಗಡಲಪುರ ನಾಗೇಂದ್ರ ಎಚ್ಚರಿಕೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 21 : ರೈತರ ಸ್ವಾಧೀನದಲ್ಲಿರುವ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಸರ್ಕಾರ ಕಸಿಯಲು ಬಿಡುವುದಿಲ್ಲ. ಯಾವುದೇ

error: Content is protected !!