ಬೆಂಗಳೂರು: ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಯಾವುದೋ ಮತ ಬ್ಯಾಂಕ್ ಗಾಗಿ ನಾನು ನನ್ನ ಧ್ವನಿ ಎತ್ತಿಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಇದ್ದರೆ ಧ್ವನಿ ಎತ್ತುವುದು ಜೆಡಿಎಸ್ ಅನ್ನೋದನ್ನು ಹಲವಾರು ಬಾರಿ ತೋರಿಸಿದ್ದೇವೆ. ಇವತ್ತಿನ ಬೆಲೆ ಏರಿಕೆ ವಿಚಾರದಲ್ಲಿ ಬೊಮ್ಮಾಯಿ ಅವರಿಗೆ ಹೇಳುತ್ತೇನೆ, ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಹೋಗಿದ್ರಲಗಲ ಬಂದು ಮೊದಲು ಈ ಬೆಲೆ ಏರಿಕೆ ವಿಚಾರದಲ್ಲಿ ನಾಡಿನ ಜನರ ಆಕ್ರೋಶವೇನಿದೆ ಇದನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸಿ ಎಲ್ಲವನ್ನು ಸರಿಪಡಿಸುವ ಜವಬ್ದಾರಿ ನಿಮ್ಮ ಮೇಲಿದೆ.
ಸರ್ವ ಮನಸ್ಕರ ಜೊತೆ ಚರ್ಚೆ ಮಾಡಿ, ಶಾಂತಿಯುತ ಹೋರಾಟ ಘೋಷಣೆ ಮಾಡಿದ್ದೇನೆ. ನಿಮಗೆ ರಂಜಾನ್ ಹಬ್ಬ ಮುಗಿ
ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ. ನೀವೂ ನನ್ನನ್ನು ಲಘುವಾಗಿ ಪರಿಗಣಿಸಿದ್ರೆ, ಯಾವ ಯಡಿಯೂರಪ್ಪ ಸರ್ಕಾರದಲ್ಲಿ ಅಪ್ಪ ಮಗನನ್ನು ಮುಗಿಸ್ತೀನಿ ಅಂತ ಹೇಳಿದ್ರು. ಆ ಮಾತನ್ನು ಹೇಳಿದ್ಮೇಲೆ ಶುರು ಮಾಡಿದ್ರು. ಏನಾಯ್ತು ಅನ್ನೋದು ಇತಿಹಾಸವಿದೆ. ಆ ರೀತಿಯ ವಾತಾವರಣ ನಿರ್ಮಾಣ ಮಾಡುವುದು ಬೇಡ. ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟ. ಇದಕ್ಕೆ ಧಕ್ಕೆಯುಂಟು ಮಾಡಬೇಡಿ ಎಂದಿದ್ದಾರೆ.
ಕಾಶ್ಮೀರ್ ಪೊಐಲ್ಸ್ ಗೆ 100% ಟ್ಯಾಕ್ಸ್ ಫ್ರೀ ಕಟ್ಟಿದ್ರಲ್ಲ, ಜನ ದುಡ್ಡು ಕೊಟ್ಟು ಸಿನಿಮಾ ನೋಡ್ತಾರಲ್ಲ ಆ ಹಣದಲ್ಲಿ ಸಂಬಳ ಕೊಡೋಸಕ್ಕೆ ಆಗ್ತಾ ಇರ್ಲಿಲ್ವಾ. ನಿಮ್ಗೆನಾದ್ರೂ ಮನುಷ್ಯತ್ವ ಇದೆಯಾ. ಇದನ್ನೇನಾ ನಮ್ಮ ಹಿಂದೂ ಧರ್ಮ ನಿಮಗೆ ಹೇಳಿರೋದು. ಬದುಕಿನ ಜೊತೆ ಚೆಲ್ಲಾಟವಾಡಿ ಅಂತ ಹಿಂದೂ ಧರ್ಮ ಹೇಳುತ್ತಾ. ಅತಿಥಿ ಉಪನ್ಯಾಸಕರನ್ನು ಬೀದಿ ಪಾಲು ಮಾಡಿದ್ರಿ. ಯಾವ್ಯಾವ ರೀತಿಯಲ್ಲಿ ಸರ್ಕಾರ ನಡೆಸುತ್ತಾ ಇದ್ದೀರಿ. ಇದು ನಿಮ್ಮ ಹಿಂದೂ ಧರ್ಮವಾ..? ಇದನ್ನೇ ನಾನೂ ಖಂಡಿಸ್ತಾ ಇರೋದು. ಸರ್ಕಾರಕ್ಕೆ ನಾನು ಎಚ್ಚರಿಕೆ ಕೊಡುತ್ತಿರೋದು. ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ ಎಂದಿದ್ದಾರೆ