ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ತುಂಬಾ ಸಮಯ ಕೊಡುತ್ತಾರೆ. ಅದು ದೇಹ ಸೌಂದರ್ಯ ಆಗಿರಬಹುದು, ಮುಖದ ಸೌಂದರ್ಯವೂ ಆಗಿರಬಹುದು. ಆದರೆ ಪ್ರತಿದಿನ ಹೊರಗೆ ಓಡಾಡುವಾಗ ಒಂದಷ್ಟು ಮುಖದ ಅಂದ ಹಾಳಾಗಿರುತ್ತೆ. ಧೂಳಿನಿಂದ ಮುಖವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಹಲವರು ಮಾಸ್ಕ್ ಮೊರೆ ಹೋಗುತ್ತಾರೆ.
ಮಾಸ್ಕ್ ಹಾಕುವುದರಿಂದ ಚರ್ಮದ ಮೇಲಿನ ಧೂಳಿನ ಕಣ, ಡೆಡ್ ಸ್ಕಿನ್ ರಿಮೂವ್ ಆಗುತ್ತೆ. ಟ್ಯಾನ್ ಹೋಗುತ್ತೆ ಎಂಬ ನಂಬಿಕೆ. ಹೀಗಾಗಿ ಪುರುಷರು ಕೂಡ ಮಾಸ್ಕ್ ಬಳಕೆಗೆ ಒತ್ತು ಕೊಡುತ್ತಾರೆ. ಆದರೆ ಈ ರೀತಿ ಮಾಸ್ಕ್ ಬಳಕೆ ಚರ್ಮಕ್ಕೆ ಎಷ್ಟು ಸೇಫ್..? ಅದರಲ್ಲೂ ಪ್ರತಿದಿನ ಏನಾದರೂ ಮಾಸ್ಕ್ ಬಳಸುತ್ತಿದ್ದರೆ ಮುಂದಿನ ದಿನಗಳಲ್ಲಿ ಚರ್ಮಕ್ಕೆ ಏನಾಗಲಿದೆ. ಈ ಎಲ್ಲಾ ಮಾಹಿತಿ ಇಲ್ಲಿದೆ.
ಯಾವುದನ್ನೇ ಆಗಲಿ ನಿಯಮಿತವಾಗಿ ಬಳಸುವುದು ಸೂಕ್ತ. ಅಷ್ಟೇ ಅಲ್ಲ, ತಮ್ಮ ದೇಹಕ್ಕೆ ಆ ಪ್ರಾಡೆಕ್ಟ್ ಅಡ್ಜೆಸ್ಟ್ ಆಗುತ್ತಾ ಎಂಬುದನ್ನು ಗಮನಹರಿಸಬೇಕಾಗುತ್ತದೆ. ಫೇಸ್ ಮಾಸ್ಕ್ ಬಳಕೆ ಮಾಡುವಾಗ ಹಲವು ಫ್ಲೇವರ್ ಇರುತ್ತವೆ. ಅದರಲ್ಲು ನಿಮ್ಮ ಮುಖದ ಚರ್ಮಕ್ಕೆ ಹೊಂದಿಕೊಳ್ಳುವುದನ್ನು ಮೊದಲು ಗಮನ ಹರಿಸಿ, ಬಳಿಕ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಫೇಸ್ ಮಾಸ್ಕ್ ಬಳಸಿ. ಹೆಚ್ಚಾಗಿ ಬಳಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಚರ್ಮ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಇನ್ನು ಈ ಪೀಲ್ ಮಾಸ್ಕ್ ಬಳಕೆ ಮಾಡಿದ ಮೇಲೆ ಮುಖ ತೊಳೆಯಬೇಕಾ ಬೇಡವಾ ಎಂಬುದು ಹಲವರ ಅನುಮಾನ. ತೊಳೆಯುವ ಅವಶ್ಯಕತೆ ಹೆಚ್ಚಾಗಿ ಇರುವುದಿಲ್ಲ. ಫೇಸ್ ಮಾಸ್ಕ್ ಬಳಕೆ ಮಾಡಿದ ಬಳಿಕ ತುರಿಕೆಯಂತಹ ಸಮಸ್ಯೆ ಇದ್ದರೆ ಮುಖ ತೊಳೆಯಬಹುದು.