ಜನರ ಮುಂದೆ ಕಾಂಗ್ರೆಸ್ ಕಪಟ ನಾಟಕ ಮಾಡೋದು ಬೇಡ. ಗೌರವದಿಂದ ಪ್ರತಿಪಕ್ಷಗಳಾಗಿ ಸರ್ಕಾರಕ್ಕೆ ಸಲಹೆ ಕೊಡಿ. ಇಡಿ ಮುಂದೆ ನಿಮ್ಮ ತಪ್ಲು ಒಪ್ಪಿಕೊಳ್ಳಿ. ಮೋದಿ ಅವರು ಇಡಿಯನ್ನು ಛೂ ಬಿಟ್ಟಿಲ್ಲ. ಇಡಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
ಅಗ್ನಿಪಥ್ ಯೋಜನೆ ಜಾರಿ ವಿರೋಧ ವಿಚಾರವಾಗಿ ಮಾತನಾಡಿ, ಯಾರಿಗೆ ಆಸಕ್ತಿ ಇದೆಯೋ ಅವರು ಸೇರಿಕೊಳ್ಳಲಿ. ಕಾಂಗ್ರೆಸ್ ಪಿತೂರಿಯಿಂದ, ಕೈವಾಡದಿಂದ ಹೋರಾಟ ನಡೆಯುತ್ತಿದೆ. ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿ ಮಾಡುತ್ತಿದ್ದಾರೆ. ಟ್ರೈನ್ ಗೆ ಬೆಂಕಿ ಹಚ್ಚುತ್ತಿದ್ದಾರೆ.
ಈಗಾಗಲೇ ಸ್ಪಷ್ಟವಾಗಿ ಹೇಳಲಾಗಿದೆ. ಕೆಲವುರು RSS ಬಗ್ಗೆ ಹೇಳ್ತಾರೆ. RSS ದೇಶ ಭಕ್ತಿ ಸಂಘಟನೆ. ಸ್ವಯಂ ಸೇವಕರು ಅವರು ,ವಿಪತ್ತು, ಆಪತ್ತು ಬಂದಾಗ ಮೊದಲು ಬೀದಿಗಿಳಿದು ಜನರ ರಕ್ಷಣೆ ಮಾಡ್ತಾರೆ. ಎಷ್ಟೋ ಜನ ಮದುವೆ ಆಗದೆ ದೇಶಕ್ಕೆ ಸಮರ್ಪಣೆ ಮಾಡಿಕೊಂಡಿದ್ದಾರೆ. RSS ನವರನ್ನು ನೀವು ಟಾರ್ಗೆಟ್ ಮಾಡಿದ್ರೆ, ಜನ ನಿಮ್ಮನ್ನು ಭಸ್ಮ ಮಾಡ್ತಾರೆ. RSS ನವರು ಯಾಕೆ ಅಗ್ನಿಪಥ್ ಗೆ ಸೇರಬಾರದು. ಅವರೇನು ದೇಶ ವಿರೋಧಿಗಳಾ. ದೇಶ ವಿರೋಧಿಗಳನ್ನು ಇವರು ರಕ್ಷಣೆ ಮಾಡ್ತಾರೆ. ಭಾರತ್ ಮಾತಾಕೀ ಜೈ ಎಂದವರನ್ನು ಕೊಲ್ಲುತ್ತಾರೆ. ಆದರೆ ಸರ್ಕಾರ ಭಾರತ ಮಾತಾಕೀ ಜೈ ಎಂದವರನ್ನು ರಕ್ಷಣೆ ಮಾಡುತ್ತದೆ ಎಂದಿದ್ದಾರೆ.