ಮಂಡ್ಯ: ರಾಜಕಾರಣಿಗಳು ಯಾವಾಗಲೂ ಸೀರಿಯಸ್ ಅಲ್ಲ. ಮಾತನ್ನು ಸೀರಿಯಸ್ ಆಗಿ ಆಡುತ್ತಾರೆ, ವಾಗ್ದಾಳಿಯನ್ನು ಸೀರಿಯಸ್ ಆಗಿ ಮಾಡುತ್ತಾರೆ. ಆದರೆ ಇವರ ನಡುವೆಯೂ ಆಗಾಗ ಫನ್ ಮೂಮೆಂಟ್ ನಡೆಯುತ್ತದೆ. ಅಂಥದ್ದೊಂದು ಘಟನೆ ಇಂದು ಮಂಡ್ಯದಲ್ಲಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಹಾಕಿದ್ದ ಹಾರದಲ್ಲಿನ ಹಣ್ಣನ್ನೇ ಕಿತ್ತು ತಿಂದಿರುವ ಸನ್ನಿವೇಶ ಕಂಡು ಬಂದಿದೆ.
ಸದ್ಯ ಚುನಾವಣಾ ಪ್ರಚಾರದಲ್ಲಿ ರಾಜಕೀಯ ಪಕ್ಷಗಳು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕಾಂಗ್ರೆಸ್ ಕೂಡ ಪ್ರಜಾಧ್ವನಿ ಎಂಬ ಕಾರ್ಯಕ್ರಮದಡಿ ಜನರ ಬಳಿ ತಲುಪುತ್ತಿದೆ. ಇಂದು ಮಂಡ್ಯದಲ್ಲಿ ರ್ಯಾಲಿ ನಡೆದಿದೆ. ಈ ವೇಳೆ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತೆರೆದ ವಾಹನದಲ್ಲಿ ಪ್ರಚಾರ ಆರಂಭಿಸಿದ್ದರು. ಈ ವೇಳೆ ಅಭಿಮಾನಿಗಳೆಲ್ಲಾ ಕಾಂಗ್ರೆಸ್ ನಾಯಕರಿಗೆ ಪೈನಾಪಲ್ ಹಾರವನ್ನು ಹಾಕಿದರು.
ಹಾರ ತುಂಬಾ ದೊಡ್ಡದಾಗಿತ್ತು. ಹೀಗಾಗಿ ಜೆಸಿಬಿ ಮೂಲಕ ಹಾರವನ್ನು ಹಾಕಲಾಗಿತ್ತು. ಈ ವೇಳೆ ಹಾರದಿಂದಾನೇ ಡಿಕೆಶಿ ಪಕ್ಕದಲ್ಲಿ ಇದ್ದ ಒಬ್ಬರು ಹಣ್ಣನ್ನು ಕಿತ್ತುಕೊಟ್ಟರು. ಆ ಹಣ್ಣನ್ನು ಡಿಕೆ ಶಿವಕುಮಾರ್ ಕೈನಲ್ಲಿಯೇ ಎರಡು ಭಾಗ ಮಾಡಿ, ತಿಂದರು. ಜೊತೆಗೆ ಪಕ್ಕದಲ್ಲಿಯೂ ಇದ್ದವರಿಗೂ ನೀಡಿದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…