ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಾಳೆಯಿಂದ ಪಾದಯಾತ್ರೆ ಶುರು ಮಾಡಲಿದ್ದಾರೆ. ಸದ್ಯ ಕೊರೊನಾ ಹೆಚ್ಚಳದ ಹಿನ್ನೆಲೆ ರಾಜ್ಯದಲ್ಲೂ ಟಫ್ ರೂಲ್ಸ್ ಜಾರಿಯಲ್ಲಿದೆ. ಹೀಗಾಗಿ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿದ್ದು, ಎಲ್ಲಿದೆ ರೀ ಕೊರೊನಾ. ಯಾರಾದರೂ ಐಸಿಯು ನಲ್ಲಿ ಅಡ್ಮಿಟ್ ಆಗಿದ್ದಾರಾ..? ಕೊರೊನಾದಿಂದ ಯಾರಾದ್ರೂ ನರಳುತ್ತಿದ್ದಾರಾ..? ಈಗಾಗಲೇ ಅಧಿಕಾರಿಗಳು ಕೇಸ್ ಹಾಕುವಂತೆ ಹೇಳಿದ್ದಾರೆ ನಮಗೆ ಏನು ತೊಂದರೆ ಕೊಡ್ತಾರೋ ಕೊಡಲಿ ಎಂದಿದ್ದಾರೆ.
ಬಿಜೆಪಿಯವರು ನಮ್ಮ ಪಾದಯಾತ್ರೆ ತಡೆಯಬೇಕು ಅಂತ ಸುಳ್ಳು ಪ್ರಕರಣ ಸಂಖ್ಯೆಯನ್ನು ದಾಖಲಿಸುತ್ತಿದ್ದಾರೆ. ಬಿಜೆಪಿಯಲ್ಲಿ ವೀರರೂ, ಶೂರರೂ ಇದ್ದಾರೆ. ನಾವೂ ಹೆಂಗಸರು, ನಾವೂ ಶಿಖಂಡಿಗಳು, ನಾವೆಲ್ಲಾ ಸೀರೆಯುಟ್ಟಿದ್ದೇವೆ. ನೀವೇ ನೋಡಿದ್ದೀರಲ್ಲ ಗಂಡಸು ಯಾರೆಂದು. ಸಿಎಂ ಮುಂದೆಯೇ ಹೇಳಿದ್ದಾರಲ್ಲ. ಅದಕ್ಕೆ ನಾವೆಲ್ಲಾ ಹೆದರುತ್ತೇವೆ. ನಾಳೆ ಪಾದಯಾತ್ರೆಯನ್ನ ಮಾಡಿಯೇ ಮಾಡ್ತೇವೆ ಎಂದು ಚಾಲೆಂಜ್ ಹಾಕಿದ್ದಾರೆ.
ಬಿಜೆಪಿಗರು ಹೆಣದಲ್ಲಿ, ಔಷಧಿಯಲ್ಲಿ, ಪರಿಹಾರದಲ್ಲಿ ಹಣ ಹೊಡೆದಿದ್ದಾರೆ. ಇದು 40 ಪರ್ಸೆಂಟ್ ಕಮಿಷನ್ ಸರ್ಕಾರ. ಇದನ್ನೆಲ್ಲಾ ನಾವೆಲ್ಲಿ ಬಯಲಿಗೆಳೆಯುತ್ತಿವೋ ಅಂತ ನಮ್ಮನ್ನ ಹತ್ತಿಕ್ಕಲು ಯತ್ನಿಸುತ್ತಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ರೈತರಿಗೆ, ಬಡವರಿಗೆ ಕಾಂಗ್ರೆಸ್ ಮಾಡಿದ್ದಷ್ಟು ಸಹಾಯವನ್ನ ಬಿಜೆಪಿ ಮಾಡಲಿಲ್ಲ ಎಂದಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…