ಬೆಂಗಳೂರು: ಯಡಿಯೂರಪ್ಪ ಅವರಿಗೆ ಒಳ್ಳೆ ಸ್ಥಾನ ಸಿಗುತ್ತಾ ಇಲ್ಲ, ಅವರ ಅನುಭವಕ್ಕೆ ತಕ್ಕನಾಗಿ ಬಿಜೆಪಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಚುನಾವಣೆ ತನಕ ಬಿಎಸ್ವೈ ಅವರನ್ನು ತಳ್ಳಿಕೊಂಡು ಹೋಗುತ್ತಿದೆ. ಯಡಿಯೂರಪ್ಪ ಅವರ ಮಾತಿನಲ್ಲಿಯೇ ಎಲ್ಲವೂ ಗೊತ್ತಾಗುತ್ತಿದೆ. ಅವರು ನಿನ್ನೆ ಏನೇನು ಮಾತನಾಡಿದ್ದಾರೆ ಆ ಮಾತಿನಲ್ಲಿಯೇ ಅವರ ನೋವು, ದುಗುಡ ಎಲ್ಲಾ ಅರ್ಥ ವಾಗಿದೆ. ಮಾಧುಸ್ವಾಮಿ ಹೇಳಿಲ್ವಾ, ಗಾಡಿ ತಳ್ಳಿಕೊಂಡು ಹೋಗುತ್ತಾ ಇದ್ದೀವಿ ಅಂತ. ಆ ರೀತಿ ತಳ್ಳಿಕೊಂಡು ಹೋಗುತ್ತಾ ಇದ್ದಾರೆ. ಅಲ್ಲಿ ಒಬ್ಬರಿಗೊಬ್ಬರ ವಿಚಾರ ಕುದಿತಾ ಇದೆ ಎಂದಿದ್ದಾರೆ.
ಇದೆ ವೇಳೆ ಸಿಎಂ ಬೊಮ್ಮಾಯಿ ಅವರ ಬಗ್ಗೆ ಮಾತನಾಡಿ, ಬೊಮ್ಮಾಯಿ ಅವರು ಯಾವಾಗಲೂ ಮಾರ್ಕೆಟ್ ನಲ್ಲಿ ಇರಬೇಕು ಎಂದು ಈ ರೀತಿ ಮಾತನಾಡುತ್ತಾರೆ. ಭ್ರಷ್ಟಚಾರ, ವೋಟರ್ ಐಡಿ ಬಗ್ಗೆ ಮಾತನಾಡಲಿ ನೋಡೋಣಾ. ಅವರು ಯಾವಾಗಲೂ ಮಾರ್ಕೆಟ್ ನಲ್ಲಿ ಹೆಸರು ಓಡಲಿ ಅಂತ ಹೀಗೆ ಮಾತನಾಡುತ್ತಾರೆ. ಕರೆಪ್ಶನ್ ಯಾವ ರೀತಿ ಆಗ್ತಿದೆ, ಕರ್ನಾಟಕದ ಜನರಿಗೆ ಹೇಗೆ ಮೋಸ ಮಾಡುತ್ತಿದ್ದಾರೆ ಎಂಬುದು ಮೊದಲು ಜನರ ಮುಂದೆ ಚರ್ಚೆಯಾಗಲಿ ಎಂದು ಸವಾಲು ಹಾಕಿದ್ದಾರೆ.
ಇನ್ನು ಮಂಗಳೂರು ಬ್ಲಾಸ್ಟ್ ಬಗ್ಗೆ ಮತ್ತೆ ಸಮರ್ಥನೆ ಮಾಡಿಕೊಂಡಿರುವ ಡಿಕೆಶಿ, ನಾನು ಹೇಳಿಕೆ ಕೊಟ್ಟಿದ್ದು ಸತ್ಯಾಂಶ ಇದೆ. ಬಿಜೆಪಿ ನಾಯಕರ ವಿರುದ್ಧ ಮತ್ತೆ ಗುಡುಗಿದ್ದು, ನಾನು ಹೇಳಿದ ವಿಚಾರದಲ್ಲಿ ಸತ್ಯಾಂಶವಿದೆ. ಯಡಿಯೂರಪ್ಪ ಅವರ ಬಗ್ಗೆ ವಿಷಯಗಳು ಇದ್ದವು. ಭ್ರಷ್ಟಚಾರ, ಮತದಾರರ ವಿಚಾರಬಂದಾಗ ಈ ರೀತಿಯೇ ಆಗುವುದು. ರಾಜಕೀಯವಾಗಿ ದುರ್ಬಳಕೆ ಆಗ್ತಿದೆ ಎಂದಿದ್ದೇನೆ ಅಷ್ಟೆ. ಇಂಥ ಸಂದರ್ಭದಲ್ಲಿ ನಮ್ಮ ಗೌರವವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಬೆಂಗಳೂರನ್ನು ಇಡೀ ವಿಶ್ವ ನೋಡುತ್ತಾ ಇದೆ. ಏನಾದರೂ ಇದ್ರೆ ಮೊದಲು ತನಿಖೆ ಮಾಡಿ. ದೇಶದ ಐಕ್ಯತೆಗೆ ನಮ್ಮ ಪಾರ್ಟಿ ಸದಾ ಸಿದ್ದವಾಗಿದೆ ಎಂದಿದ್ದಾರೆ.