ಮೈಸೂರು: ಒಂದು ಕಡೆ ಕೊರೊನಾ ಕಾಟ..ಮೂರನೇ ಅಲೆ ಶುರುವಾಗಬಹುದು ಎಂಬ ಆತಂಕ.ಮತ್ತೊಂದು ಕಡೆ ಮಳೆಗಾಲ..ಈ ಸಮಯದಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಪತ್ತೆಯಾಗೋದು ಸಹಜ. ಅದರಲ್ಲಿ ಡೆಂಗ್ಯೂ ಕೂಡ. ಆದ್ರೆ ಈ ಕೊರೊನಾ ಸಮಯದಲ್ಲಿ ಡೆಂಗ್ಯೂ ಕಾಟಕ್ಕೆ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ.
ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಬೊಮ್ಮೆನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 9 ವರ್ಷದ ಸ್ಪಂದನ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾಳೆ.
ಮೃತ ಬಾಲಕಿ ಸ್ಪಂದನಾ ಕಳೆದ ಮೂರ್ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದಳಂತೆ. ಅಲ್ಲೆ ಹತ್ತಿರದಲ್ಲಿದ್ದ ಕ್ಲಿನಿಕಲ್ ನಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದಳಂತೆ. ಆದ್ರೆ ಜ್ವರ ಜಾಸ್ತಿಯಾಗಿ ಹೆಚ್ವಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.