ದಾವಣಗೆರೆ: ಶಾಸಕ ರೇಣುಕಾಚಾರ್ಯ ಅವರ ಅಣ್ಣನ ಮಗನ ಮೃತ ದೇಹ ಸಿಕ್ಕಿ ಐದು ದಿನಗಳಾಗಿದೆ. ಆದ್ರೆ ಇಲ್ಲಿಯ ತನಕ ಅದು ಕೊಲೆ ಎಂಬುದಕ್ಕೆ ಸಾಕ್ಷಿಗಳು ಸಿಗುತ್ತಿಲ್ಲ. ಮಗನನ್ನು ಹಿಂಸಿಸಿ ಕೊಲೆ ಮಾಡಲಾಗಿದೆ ಎಂದು ರೇಣುಕಾಚಾರ್ಯ ಅವರು ಆರೋಪ ಮಾಡಿದ ಬೆನ್ನಲ್ಲೆ ತನಿಖೆ ಚುರುಕುಗೊಂಡಿದೆ. ಇದೀಗ ಡಯಾಟಂ ವರದಿ ಕೂಡ ಪೊಲೀಸರ ಕೈಸೇರಿದ್ದು, ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದು ಕನ್ಫರ್ಮ್ ಆಗಿದೆ. ಈ ಮೂಲಕ ಸಹಜ ಸಾವು ಎಂದೇ ಪ್ರೂವ್ ಆಗುತ್ತಿದೆ.
ಸಾಯುವ ಮುನ್ನ ವ್ಯಕ್ತಿಯ ಶ್ವಾಸಕೋಶದ ಒಳಗೆ ನೀರು ಹೋಗುವುದನ್ನು ಡಯಾಟಂ ವರದಿ ಎನ್ನಲಾಗುತ್ತೆ. ಚಂದ್ರು ಬದುಕಿದ್ದಾಗಲೇ ನಾಲೆಗೆ ಬಿದ್ದಿರುವ ಸಾಧ್ಯತೆ ಇದೆ. ಡಯಾಟಂ ವರದಿಯ ಪ್ರಕಾರ ಚಂದ್ರು ಸಾವು ಸಹಜ ಸಾವು ಎನ್ನಲಾಗುತ್ತಿದೆ. ಆದ್ರೆ ಪೋಸ್ಟ್ ಮಾರ್ಟಮ್ ನ ಪೂರ್ಣ ವರದಿಗಾಗಿ ಪೊಲೀಸರು ಕೂಡ ಕಾಯುತ್ತಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 150 ಕ್ಕೂ ಹೆಚ್ಚು ಜನರನ್ನು ಪರಿಶೀಳನೆ ಮಾಡಿದ್ದಾರೆ. ಚಂದ್ರು ಓಡಾಡಿದ ಕಡೆಯಲ್ಲೆಲ್ಲಾ ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸಿದ್ದಾರೆ. ಆದ್ರೆ ಯಾವುದರಲ್ಲಿಯೂ ಕೊಲೆ ಎಂಬುದಕ್ಕೆ ಮಹತ್ವದ ತಿರುವು ಕಾಣುತ್ತಿಲ್ಲ. ಈ ಮಧ್ಯೆ ಸಾವಿಗೂ ಮುನ್ನ ಭೇಟಿ ನೀಡಿದ್ದ ಗೌರಿಗದ್ದೆ ಆಶ್ರಮಕ್ಕೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ.