ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ಮೊಟ್ಟೆ ಹೋರಾಟ ಶುರುವಾಗಿದೆ. ಸ್ವಾಮೀಜಿಗಳೆಲ್ಲಾ ಒಂದಾಗಿ ಶಾಲೆಯಲ್ಲಿ ಮೊಟ್ಟೆ ನೀಡುವುದನ್ನು ನಿಲ್ಲಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಪೋಷಕಾಂಶದ ಕೊರತೆಯಿಂದಾಗಿ ಸರ್ಕಾರಿ ಶಾಲೆಯಲ್ಲಿ ಊಟದ ಜೊತೆ ಮೊಟ್ಟೆಯನ್ನು ನೀಡಲಾಗುತ್ತಿದೆ. ಶಾಲೆಯಲ್ಲಿ ಮೊಟ್ಟೆ ತಿನ್ನದ ಸಮುದಾಯದ ಮಕ್ಕಳು ಇರ್ತಾರೆ. ಹೀಗಾಗಿ ಮೊಟ್ಟೆ ನೀಡುವುದನ್ನು ನಿಲ್ಲಿಸಿ ಇಲ್ಲವಾದರೇ ಉಗ್ರ ಹೋರಾಟ ಮಾಡ್ತೇನೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಇದೀಗ ದಯಾನಂದ ಸ್ವಾಮೀಜಿ ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ ಎಂದಿದ್ದಾರೆ. ಈ ಸಂಬಂಧ ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪೋಷ್ಟಿಕಾಂಶದ ಹೆಸರಿನಲ್ಲಿ ಸರ್ಕಾರ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಮೊಟ್ಟೆ ತಿನ್ನಿಸುವುದನ್ನು ಕೈ ಬಿಡಬೇಕು. ಮೊಟ್ಟೆಗಿಂತಲೂ ಪೋಷ್ಟಿಕವಾದ ಆಹಾರ ಪದಾರ್ಥ ಸಸ್ಯಹಾರದಲ್ಲಿದೆ. ಪೋಷಕಾಂಶ ಹೆಚ್ಚಾಗಿರುವ ಸಸ್ಯಹಾರವನ್ನೇ ನೀಡಲಿ ಎಂದಿದ್ದಾರೆ.
ಶಾಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಿ ಮೊಟ್ಟೆಯನ್ನಲ್ಲ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಕೊಡಲಾಗುತ್ತೆ. ಎಲ್ಲರನ್ನು ಒಂದೇ ತರವಾಗಿ ಸರ್ಕಾರ ನೋಡಬೇಕು. ಕಾಂಗ್ರೆಸ್ – ಜೆಡಿಎಸ್ ತೆಗೆದಿರು ಈ ಯೋಜನೆಯನ್ನ ಬಿಜೆಪಿ ಏಕೆ ಮುಂದುವರೆಸಿದೆ. ಲಿಂಗಾಯತ, ಬ್ರಾಹ್ಮಣರಿಂದ ಮತ ಪಡೆದ ಬಿಜೆಪಿ ಈ ರೀತಿ ಏಕೆ ಮಾಡಿದೆ ಎಂದು ಅಖಿಲ ಭಾರತ ಸಸ್ಯಹಾರಿ ಪ್ರಧಾನ ಸಂಚಲಾಕರಾದ ದಯಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಇನ್ನು ಶಾಲೆಯಲ್ಲಿ ಮೊಟ್ಟೆಯನ್ನು ಮುಕ್ತಗೊಳಿಸದಿದ್ದರೆ,ನಮ್ಮವರಿಗೆ ಪ್ರತ್ಯೇಕ ಶಾಲೆ ಮಾಡಿ ಎಂದಿದ್ದಾರೆ. ಸಸ್ಯಹಾರಿ ಪರ ಲಕ್ಷಾಂತರ ಮಕ್ಕಳಿದ್ದಾರೆ. ಅವರಿಗೆ ಪ್ರತ್ಯೇಕ ಅಂಗನವಾಡಿ ಮತ್ತು ಶಾಲೆಯನ್ನು ತೆರೆಯಬೇಕು. ಈ ಸಂಬಂಧ ಡಿಸೆಂಬರ್ 20ರಂದು ಅಧಿವೇಶನ ಸಂದರ್ಭದಲ್ಲಿ ಸಂತ ಸಮಾವೇಶ ಮತ್ತು ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.