ಬೆಂಗಳೂರು: ರಾಜಕೀಯ ವ್ಯಕ್ತಿಗಳು ತಿರುಗೇಟು ನೀಡಲೇಬೇಕೆಂದು ಹೋದಾಗ ಕೆಲವೊಮ್ಮೆ ಎಲ್ಲೆ ಮೀರಿ.. ತಮ್ಮ ಲಿಮಿಟ್ಸ್ ಕ್ರಾಸ್ ಮಾಡಿ ಮಾತನಾಡೋದಕ್ಕೆ ಶುರು ಮಾಡಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಇದೀಗ ಸಿ ಟಿ ರವಿ ಅವರು ಮಾಡಿರುವ ಟ್ವೀಟ್.
ಕಳೆದ ಕೆಲವು ದಿನಗಳಿಂದ ಸಿದ್ದರಾಮಯ್ಯ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ನಡುವೆ ಕಂಬಳಿ ವಿಚಾರಕ್ಕೆ ಮಾತಿನ ಸಮರ ನಡೆಯುತ್ತಿದೆ. ಕಂಬಳಿ ಹಾಕಿಕೊಂಡು ಚುನಾವಣಾ ಪ್ರಚಾರ ಮಾಡಿದ ಸಿಎಂ ಬೊಮ್ಮಾಯಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ರು. ಕಂಬಳಿ ಹಾಕಿಕೊಂಡ ತಕ್ಷಣ ಆ ಗೌರವ ಬರುತ್ತಾ ಅಂತ ಪ್ರಶ್ನಿಸಿದ್ದರು.
ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ
ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? pic.twitter.com/2VAD7qL5xJ
— C T Ravi 🇮🇳 ಸಿ ಟಿ ರವಿ (@CTRavi_BJP) October 26, 2021
ಆ ಬಳಿಕ ಇದೇ ವಿಚಾರಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ತಿರುಗೇಟು ನೀಡಿದ್ರು. ಕಂಬಳಿ ಹಿಂದೆ ಹಾಲುಮತದವರ ಪರಿಶ್ರಮ ಮತ್ತು ಗೌರವ ಅಡಗಿರುತ್ತೆ ಎಂದಿದ್ದರು. ಇದೇ ವಿಚಾರಕ್ಕೆ ಟ್ವೀಟ್ ಮಾಡಿರುವ ಸಿ ಟಿ ರವಿ, ಎಲ್ಲರಿಗೂ ದಿಗ್ಬ್ರಾಂತರನ್ನಾಗಿಸಿದ್ದಾರೆ.
ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ. ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಸದ್ಯ ಈ ಟ್ವೀಟ್ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜಕಾರಣಿಗಳಿಗೆ ಆಗಲಿ ಯಾರಿಗೆ ಆಗಲಿ ಮಾತಾಡುವಾಗ ಪದ ಬಳಕೆಯ ಬಗ್ಗೆಯೂ ಸ್ವಲ್ಪ ಗಮನವಿರಲೇಬೇಲಾಗುತ್ತದೆ. ವಿಪಕ್ಷಗಳನ್ನ ಅಳೆಯುವಾಗ, ಕಾಲೆಳೆಯುವಾಗ ಇಂಥ ಮಾತುಗಳು ಬಂದರೆ ಹಾಡಿದವರ ಘನತೆ, ಗೌರವಕ್ಕೂ ಧಕ್ಕೆಯೆ.