ಮಂಡ್ಯ: ಈ ಹಿಂದೊಮ್ಮೆ ರಸ್ತೆ ಅಭಿವೃದ್ದಿಗೆ ಅನುದಾನ ತರುವ ವಿಚಾರದಲ್ಲಿ ಸಂಸದರಿಬ್ಬರ ನಡುವೆ ಕ್ರೆಡಿ ವಾರ್ ಶುರುವಾಗಿತ್ತು. ಇದೀಗ ಸಾವಿನ ಮನೆಗೆ ಪರಿಹಾರ ಕೊಡಿಸುವ ವಿಚಾರದಲ್ಲಿ ಕ್ರೆಡಿಟ್ ಸದ್ದು ಮಾಡುತ್ತಿದೆ. ಸಂಸದೆ ಸುಮಲತಾ ಹಾಗೂ ಶಾಸಕ ಅನ್ನದಾನಿ ನಡುವೆ ಈ ಕ್ರೆಡಿಟ್ ವಾರ್ ನಡೆದಿದೆ.
ಮಂಡ್ಯದ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ. ಮೃತ ಬಾಲಕಿಯ ಕುಟುಂಬಸ್ಥರಿಗೆ ಸರ್ಕಾರದಿಂದ ಸಿಎಂ ಬೊಮ್ಮಾಯಿ ಪರಿಹಾರ ನೀಡಿದ್ದಾರೆ. ಈಗ ಈ ಪರಿಹಾರದ ಕ್ರೆಡಿಗ್ ಗಾಗಿ ವಾದ ಪ್ರತಿವಾದಗಳು ನಡೆಯುತ್ತಿವೆ.
ನಾನು ಮನವಿ ಮಾಡಿಕೊಂಡಿದ್ದರಿಂದ ಸಿಎಂ ಬೊಮ್ಮಾಯಿ ಅವರು ಪರಿಹಾರ ಹಣ ಘೋಷಣೆ ಮಾಡಿದ್ದಾರೆಂದು ಜೆಡಿಎಸ್ ಶಾಸಕ ಅನ್ನದಾನಿ ತಿಳಿಸಿದ್ದಾರೆ. ಈ ವಿಚಾರಕ್ಕೆ ಆಕ್ರೋಶಗೊಂಡ ಸುಮಲತಾ ಬೆಂಬಲಿಗರು, ಬಾಲಕಿ ಮೃತಪಟ್ಟ ದಿನದಿಂದ ಸುಮ್ಮನಿದ್ದ ಅನ್ನದಾನಿ ಈಗ ಕ್ರೆಡಿಟ್ ಪಡೆಯುತ್ತಿದ್ದಾರೆ. ಸಿಎಂ ಬೊಮ್ಮಾಯಿ ಬಳಿ ಸುಮಲತಾ ಅಂಬರೀಶ್ ಮಾತನಾಡಿದ್ದ ಕಾರಣಕ್ಕೆ 10 ಲಕ್ಷ ಪರಿಹಾರವನ್ನು ನೀಡಿದ್ದಾರೆ. ಆದರೆ ಇದರ ಕ್ರೆಡಿಟ್ ಅನ್ನದಾನಿ ಪಡೆಯಲು ಹೋಗಿ ಜನಗಳ ಮುಂದೆ ಮುಖಭಂಗ ಅನುಭವಿಸಲಿದ್ದಾರೆ ಎಂದು ಬೇಲೂರು ಸೋಮಶೇಖರ್ ತಿಳಿಸಿದ್ದಾರೆ.