ಬೆಂಗಳೂರು: ಮಾಜಿ ಸಚಿವ ಸಿ ಪಿ ಯೋಗೀಶ್ವರ್ ಸರ್ಕಾರಿ ನಿವಾಸ ತೊರೆದಿದ್ದಾರೆ. ಇದು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕುವಂತೆ ಮಾಡಿದೆ. ಇಷ್ಟು ದಿನ ಮಂತ್ರಿ ಸ್ಥಾನ ಪಡೆಯಲೇಬೇಕೆಂದು ಹಠ ಹಿಡಿದು ಕುಳಿತಿದ್ದ ಸಿ ಪಿ ಯೋಗೀಶ್ವರ್ ಇದೀಗ ಇದ್ದಕ್ಕಿದ್ದ ಹಾಗೇ ಯಾಕೆ ಹೀಗೆ ಮಾಡಿದ್ರು ಅನ್ನೋ ಪ್ರಶ್ನೆಗಳು ಅವರ ಆಪ್ತವಲಯದಲ್ಲಿ ಎದ್ದಿವೆ.
ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರವಿದ್ದಾಗ ಯೋಗೀಶ್ವರ್ ಪ್ರವಾಸೋದ್ಯಮ ಸಚಿವರಾಗಿದ್ರು. ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರು ಕೆಳಗಿಳಿದ ಬಳಿಕ ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವರಾಗ್ತೀವಿ ಅಂತ ಸಿಪಿ ಯೋಗೀಶ್ವರ್ ಸಾಕಷ್ಟು ಆಸೆಗಳನ್ನಿಟ್ಟುಕೊಂಡಿದ್ರು. ಅದಕ್ಕಾಗಿ ನಾನಾ ಕಸರತ್ತುಗಳನ್ನು ನಡೆಸಿದ್ರು. ಆದ್ರೆ ಅದ್ಯಾವುದು ವರ್ಕೌಟ್ ಆದಂತೆ ಕಂಡಿಲ್ಲ.
ಮಂತ್ರಿಯಾಗೇ ಆಗ್ತೀನಿ ಅಂತ ಸರ್ಕಾರಿ ನಿವಾಸದಲ್ಲೇ ಇದ್ದ ಸಿ ಪಿ ಯೋಗೀಶ್ವರ್ ಇದೀಗ ದಿಢೀರನೇ ಸರ್ಕಾರಿ ನಿವಾಸವನ್ನು ಸಿ ಪಿ ಯೋಗೀಶ್ವರ್ ಖಾಲಿ ಮಾಡಿದ್ದಾರೆ. ಇದರಿಂದ ಸಿ ಪಿ ಯೋಗೀಶ್ವರ್ ಮಂತ್ರಿಯಾಗೋ ಆಸೆ ಬಿಟ್ರಾ ಅನ್ನೋ ಚರ್ಚೆಗಳು ಶುರುವಾಗಿದೆ. ಸದ್ಯ ಅವರಿದ್ದ ಸರ್ಕಾರಿ ನಿವಾಸವನ್ನ ಬಸವರಾಜ ಹೊರಟ್ಟಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ.