ನವದೆಹಲಿ: ಇಂದಿನಿಂದ 15 – 17 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಕೊರೊನಾದಿಂದ ಸಾವು ನೋವು ಕಡಿಮೆಯಾಗುವ ಉದ್ದೃಶದಿಂದ, ಮನುಷ್ಯನಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲೆಂಬ ಕಾರಣಕ್ಕೆ ಲಸಿಜೆ ನೀಡಲಾಗಿದೆ. ಲಸಿಕೆ ನೀಡಲು ಶುರು ಮಾಡಿದ ವರ್ಷದ ಬಳಿಕ ಮಕ್ಕಳಿಗೂ ಲಸಿಕೆ ಬಂದಿದೆ.
ಕೊರೊನಾ ಹೆಚ್ಚಳವಾಗುತ್ತಿರುವ ಆತಂಕದ ನಡುವೆ ಮಕ್ಕಳಿಗೂ ಲಸಿಕೆ ಸಿಕ್ಕಿದ್ದು ಪೋಷಕರಿಗೂ ಆತಂಕ ದೂರ ಮಾಡಿದೆ. ಇಂದಿನಿಂದ ಶುರುವಾದ ಮಕ್ಕಳ ಲಸಿಕಾ ಅಭಿಯಾನಕ್ಕೆ ಒಂದೇ ದಿನ 6 ಲಕ್ಷ ನೋಂದಣಿಯಾಗಿದೆ.
ಮಕ್ಕಳಿಗೆ ನೀಡುವ ಲಸಿಕೆಯಲ್ಲಿ ಯಾವುದೇ ಕಾರಣಕ್ಕೂ ಲಸಿಕೆ ಮಿಶ್ರ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಯಾಕಂದ್ರೆ ಸಾಕಷ್ಟು ಬಾರೀ ಲಸಿಕೆಯಲ್ಲಿ ಎಡವಟ್ಟುಗಳಾಗಿವೆ. ಆದ್ರೆ ಈ ಯಡವಟ್ಟು ಮಕ್ಕಳಮೇಲಾಗುವುದಿ ಬೇಡ ಅನ್ನೋದು ಎಲ್ಲರ ಅಭಿಪ್ರಾಯ.
ಪ್ರತ್ಯೇಕ ಕೋವಿಡ್ ಲಸಿಕೆ ಕೇಂದ್ರಗಳು, ಪ್ರತ್ಯೇಕ ಸೆಷನ್ ಕೇಂದ್ರಗಳು, ಪ್ರತ್ಯೇಕ ಸರದಿ ಸಾಲು ಮತ್ತು ಪ್ರತ್ಯೇಕ ಲಸಿಕೆ ತಂಡವನ್ನು ರಚಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಶಾಲೆಗಳಲ್ಲಿಯೇ ಲಸಿಕೆ ಶಿಬಿರಗಳನ್ನು ನಡೆಸಿದರೆ ಆದಷ್ಟು ಶೀಘ್ರವೇ ಲಸಿಕೆ ನೀಡಿಕೆ ಪೂರ್ಣಗೊಳಿಸುವಂತೆ ಹೇಳಲಾಗಿದೆ. ಉದಾಹರಣೆಗೆ ಗೋವಾದಲ್ಲಿ 15ರಿಂದ 18 ವರ್ಷದೊಳಗಿನ 72 ಸಾವಿರ ಮಕ್ಕಳಿಗೆ ಮುಂದಿನ 4 ದಿನಗಳಲ್ಲಿ ಕೊವಾಕ್ಸಿನ್ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಕೇರಳ ರಾಜ್ಯದಲ್ಲಿ ಜನವರಿ 10ರವರೆಗೆ ಸಾಮಾನ್ಯ, ಜಿಲ್ಲೆ. ತಾಲ್ಲೂಕು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ವಿತರಿಸಲಾಗುತ್ತದೆ.