ಬೆಂಗಳೂರು: ಕೊರೊನಾ ಕಂಟ್ರೋಲ್ ಗಾಗಿ ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ರೂಕ್ಸ್ ಬ್ರೇಕ್ ಮಾಡಿದ್ರೆ ಕ್ರಮ ಕೇಸ್ ಕೂಡ ದಾಖಲಾಗುತ್ತೆ ಎಂಬುದು ಗೊತ್ತು. ಆದ್ರೆ ಸಾಕಷ್ಟು ರಾಜಕಾರಣಿಗಳೇ ಈ ರೂಲ್ಸ್ ಬ್ರೇಕ್ ಮಾಡ್ತಾ ಇದ್ದಾರೆ. ಇದೀಗ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಮೇಲೆ ಎಫ್ಐಆರ್ ದಾಖಲಾಗಿದೆ.
ಕೊರೊನಾ ನಿಯಮ ಜಾರಿಯಲ್ಲಿದ್ದರು ಹುಟ್ಟಿದ ಹಬ್ಬ ಆಚರಿಸಿ, ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಹೀಗಾಗಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್ ಆರ್ ರಮೇಶ್ ತಮ್ಮ ಮನೆ ಬಳಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದೊಡ್ಡ ಸ್ಟೇಜ್ ಹಾಕಿ, ಪ್ರೋಗ್ರಾಂ ಮಾಡಿ, ಸಾಕಷ್ಟು ಜನರು ಸೇರಿದ್ದರು. ಈ ವೇಳೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇದ್ದ ಕಾರಣ ಇದೀಗ ಎನ್ ಆರ್ ರಮೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.