ಮೈಸೂರು: ಸಿ ಟಿ ರವಿ ವಿರುದ್ದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ ಹರಿಹಾಯ್ದಿದ್ದಾರೆ. ಸಿಟಿ ರವಿ ಅವರ ಯೋಗ್ಯತೆಗೆ, ಅವರ ಇತಿಹಾಸದಲ್ಲೇ ಅವರ ಸರ್ಕಾರ ಕೊಟ್ಟ ಕಾರ್ಯಕ್ರಮದ ಬಗ್ಗೆ ಮಾತಾಡಿದ್ದಾರಾ..? ಸಿಟಿ ರವಿ ಎನ್ನುವ ಒಬ್ಬ ವ್ಯಕ್ತಿ ಅವರ ರಾಜ್ಯದ, ಕೇಂದ್ರದ ಕಾರ್ಯಕ್ರಮಗಳ ಬಗ್ಗೆ ಪ್ರೆಸ್ಮೀಟ್ ನಲ್ಲಿ ಹೇಳಿದ್ದಾರಾ..? ಇಲ್ಲ ಬರೀ ಕಿಡಿ ಹತ್ತಿಸೋದೇ ಅವರ ಕೆಲಸ. ಅದು ಆರ್ ಎಸ್ ಎಸ್ ಕೊಟ್ಟಂತ ಟ್ರೈನಿಂಗ್ ಅದು. ನಮ್ಮ ರಾಜ್ಯಕ್ಕೆ ಮಾರಾಕ ಎಂಬುದರಲ್ಲಿವಯಾರಾದರೂ ಇದ್ದರೆ ಅದರಲ್ಲಿ ನಂಬರ್ ಒನ್ ಸ್ಥಾನದಲ್ಲಿ ಸಿ ಟಿ ರವಿ ಉಳಿದುಕೊಳ್ಳುತ್ತಾರೆ.
ಹುಚ್ಚುಚ್ಚರ ಥರ ಮಾತಾಡುತ್ತಾರೆ. ಅವರ ಮನಸ್ಥಿತಿ ಸೀಮಿತವಾಗಿ ಇದೆಯೋ ಇಲ್ಲವೋ ಗೊತ್ತಿಲ್ಲ. ಕುಡಿದು ಆಕ್ಸಿಡೆಂಟ್ ಮಾಡಿರುವವರು ಇವರು. ಇಬ್ಬರನ್ನು ಕೊಂದುಬಿಟ್ಟು ಹೋಗಿ ಮದ್ರಾಸ್ ನಲ್ಲಿ ಕುಳಿತ ವ್ಯಕ್ತಿ ಊರಿನವರಿಗೆಲ್ಲಾ ಪಾಠ ಹೇಳುತ್ತಾರೆ. ಸಿದ್ದರಾಮಯ್ಯ ನವರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡೋದು. ಆಮೇಲೆ ಉರ್ದು ಮಾತನಾಡಿಲ್ಲ ಅಂತ ಕೊಂದು ಬಿಟ್ಟರು ಅಂತ ಇವರೇ ಹೇಳಿಕೆ ಕೊಡುತ್ತಾರೆ. ಆಮೇಲೆ ಆರಗ ಜ್ಞಾನೇಂದ್ರ ಅವರು ಕ್ಷಮಿಸಿ ತಪ್ಪಾಯ್ತು, ಮಾಹಿತಿ ಇಲ್ಲ ಅಂತ ಒಬ್ಬ ಹೋಂ ಮಿನಿಸ್ಟರ್ ಹೇಳುತ್ತಾರೆ ಎಂದರೆ ಹೇಗೆ..?
ರಾಜ್ಯದಲ್ಲಿ ಕೋಮು ಸಂಘರ್ಷಗಳನ್ನು ಎತ್ತಿ ಇಡುವಂತ ಕೆಲಸಗಳಿಗೆ ದಾರಿ ಮಾಡಿಕೊಡುವಂತ ಕೆಲಸವನ್ನು ಸರ್ಕಾರದ ಸ್ಪಾನ್ಸರ್ ಸಂಘಟನೆಗಳ ಮೂಲಕಬಮಾಡುತ್ತಿರುವುದಕ್ಕೆ ಪೂರಕವಾಗಿ ಚಂದ್ರು ಎಂಬ ವ್ಯಕ್ತಿಯ ಕೊಲೆಯೇ ಉದಾಹರಣೆ. ಅಲ್ಲಿ ಪೊಲೀಸ್ ರಿಪೋರ್ಟ್ ಬೇರೆ. ಆಕ್ಸಿಡೆಂಟ್ ಇಂದಲೆರ ಹುಡುಗ ಸತ್ತಿದ್ದಾನೆ ಎಂದು. ಕಮೀಷನರ್ ಕೊಡುವ ಹೇಳಿಕೆ ಆಕ್ಸಿಡೆಂಟ್ ಆದ್ಮೇಲೆ ಚಾಕುವಿನಿಂದ ಇಬ್ಬರು ಚುಚ್ಚಿಕೊಂಡು ಗಲಾಟೆ ಆದ್ಮೇಲೆ ಸತ್ತಿದ್ದಾನೆ ಅಂತ. ಆದ್ರೆ ಆರಗ ಜ್ಞಾನೇಂದ್ರ ಬೇಸಿಕ್ ಜ್ಞಾನ ಇಲ್ಲದವರನ್ನು ಕರೆದುಕೊಂಡು ಹೋಗಿ ಗೃಹಮಂತ್ರಿ ಸ್ಥಾನ ಕೊಟ್ಟು ರಾಜ್ಯದ ಮಾನ ಮರ್ಯಾದೆಯನ್ನು ಇಡೀ ದೇಶದಲ್ಲಿ ನಗೆಪಾಟಲಿಗೆ ಈಡು ಮಾಡಿದ್ದಂತ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.