ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಇಡಿ ನೋಟಿಸ್ ನೀಡಿರುವ ಹಿನ್ನಲೆ, ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಉಪಸ್ಥಿತರಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದ್ದು, ನಾಳೆಯಿಂದ ಸಂಸತ್ತು ಅಧಿವೇಶನ ನಡೆಯುತ್ತಿದೆ. ಆದರೂ ಜುಲೈ 21 ರಂದು ಹಾಜರಾಗಬೇಕೆಂದು ಇಡಿ ನೋಟಿಸ್ ನೀಡಿದೆ. ನಮ್ಮ ನಾಯಕಿ ಸೋನಿಯಾಗಾಂಧಿಗೆ ಕಿರುಕುಳ ನೀಡಲು ಪ್ರಯತ್ನ. ಸುಳ್ಳು ಕೇಸ್ ಹಾಕಿ, ನಮ್ಮ ನಾಯಕರ ಮೇಲೆ ಕಪ್ಪು ಚುಕ್ಕೆ ತರಲು ಪ್ರಯತ್ನ ಮಾಡಲಾಗ್ತಿದೆ. ರಾಹುಲ್ ಗಾಂಧಿಯವರನ್ನ ಹೀಗೆ ಸುಮ್ನೆ ವಿಚಾರಣೆ ಮಾಡಿದ್ದರು. ಕೇಂದ್ರದ ವಿರುದ್ಧ ಜುಲೈ 21 ರಂದು ಬೃಹತ್ ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದೇವೆ.
ಫ್ರೀಡಂ ಪಾರ್ಕ್ ನಿಂದ ರಾಜಭವನಗೆ ಮುತ್ತಿಗೆ ಹಾಕಲು ತೀರ್ಮಾನ ಮಾಡಲಾಗಿದೆ. ಜುಲೈ 22 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುತ್ತೇವೆ. ಸೋನಿಯಾ ಗಾಂಧಿಯವರಿಗೆ ಧೈರ್ಯ ತುಂಬಲು ನಮ್ಮ ಪ್ರತಿಭಟನೆ.
ಪಕ್ಷ ಸಂಘಟನೆ ಕೂಡ ಮಾಡ್ತಾ ಇದ್ದೇವೆ. 75 ಕಿಲೋಮೀಟರ್ ಪಾದಯಾತ್ರೆ ಮಾಡ್ತಾ ಇದ್ದೇವೆ. ಜಿಲ್ಲೆಗಳಲ್ಲಿ ಪಾದಯಾತ್ರೆ ಆಗುತ್ತೆ. ಆ ಬಳಿಕ 15 ರಂದ ವಾಕ್ ಫಾರ್ ಫ್ರೀಡಂ ಪಾದಯಾತ್ರೆ ಮಾಡ್ತೇವೆ. ಪಕ್ಷಾತೀತವಾಗಿ ಪಾದಯಾತ್ರೆ ಇರುತ್ತೆ. ಭಾಷಣ ಯಾವುದು ಇರಲ್ಲ. ಎಲ್ಲ ಸಂಘ ಸಂಸ್ಥೆಗಳಿಗೆ ಆಹ್ವಾನ ಕೊಟ್ಟಿದ್ದೇವೆ. ಕಂಠೀರವ ಸ್ಟೇಡಿಯಂ ಕಾರ್ಯಕ್ರಮಕ್ಕೆ ಕೇಳಿದ್ವಿ. ಈಗ ಸ್ಟೇಡಿಯಂ ನಲ್ಲಿ ಕೆಲಸ ನಡೀತಾ ಇದೆ ಅಂತಿದ್ದಾರೆ.
ಸ್ಟೇಡಿಯಂಗಾಗಿ ನಾನು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡುತ್ತೇನೆ. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರ ಮನೆಗೆ ಹೋಗ್ತಾ ಇದ್ದೇವೆ. ಅವರಿಗೆ ಗೌರವ ಕೊಡುವ ಕೆಲಸ ಮಾಡುತ್ತೇವೆ. ಬೆಂಗಳೂರು ಸೇರಿದಂತೆ ಎಲ್ಲ ಕಡೆಯಿಂದ ಜನರು ಭಾಗಿಯಾಗ್ತಾರೆ. ಕಾಂಗ್ರೆಸ್ ಕಾರ್ಯಕ್ರಮ ಅಲ್ಲ ರಾಷ್ಟ್ರದ ಕಾರ್ಯಕ್ರಮ. ರಜೆ ಇದೆ, ಹಾಗಾಗಿ ಬಸ್ಟಾಂಡ್ ಹತ್ತಿರದಿಂದ ಪಾದಯಾತ್ರೆ ಮಾಡ್ತೇವೆ.
ನ್ಯಾಷನಲ್ ಹೆರಾಲ್ಡ್ ಕೇಸ್ ಬಗ್ಗೆ ಬುಕ್ ಬಿಡುಗಡೆ ವಿಚಾರ, ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಶೀಘ್ರವಾಗಿ ಹೆರಾಲ್ಡ್ ಕೇಸ್ ಮಾಹಿತಿ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಎಐಸಿಸಿಯಿಂದ ಮಾಹಿತಿ ಬಂದಿದೆ. ಆದಷ್ಟು ಬೇಗ ಬುಕ್ ಬಿಡುಗಡೆ ಆಗುತ್ತೆ ಎಂದಿದ್ದಾರೆ.