ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 25 : ವೀಕೆಂಡ್ ಎಂದ ಕೂಡಲೇ ಪ್ರವಾಸಕ್ಕೆಂದು ಜನ ಪ್ಲ್ಯಾನ್ ಮಾಡುತ್ತಾರೆ. ಅದರಲ್ಲೂ ಐತಿಹಾಸಿಕ ಸ್ಥಳಗಳನ್ನು ನೋಡುವುದಕ್ಕೇನೆ ಪ್ಲ್ಯಾನ್ ಮಾಡುತ್ತಾರೆ. ಚಿತ್ರದುರ್ಗದ ಕೋಟೆ ನೋಡುವುದಕ್ಕೇನೆ ಹೆಚ್ಚು ಜನ ಬರುತ್ತಾರೆ. ಹಾಗೇ ಕೋಟೆ ನೋಡಲು ಹೋದ ಯುವತಿ ಕಾಲು ಜಾರಿ ಬಿದ್ದು, ಪೆಟ್ಟು ಮಾಡಿಕೊಂಡ ಘಟನೆ ಇಂದು (ಭಾನುವಾರ) ನಡೆದಿದೆ.
ಚಿತ್ರದುರ್ಗ ನಗರದ ಕೋಟೆ ನೋಡುವಾಗ ಯುವತಿ ಕಾಲುಜಾರಿ ಬಿದ್ದಿದ್ದಾರೆ. ಶಮೀನಾ ಬಾನು ಎಂಬಾಕೆ ಕಾಲು ಜಾರಿ ಬಿದ್ದ ಯುವತಿ. ಬೆಂಗಳೂರಿನ ವಾಸಿ ಇವರು. ಚಿತ್ರದುರ್ಗದ ಕೋಟೆ ನೋಡುವುದಕ್ಕೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಂದಿದ್ದರು. ಆದರೆ ಕೋಟೆ ವೀಕ್ಷಣೆಯ ವೇಳೆ ಈ ಘಟನೆ ನಡೆದಿದೆ.
ಕಾಲು ಜಾರಿಬಿದ್ದ ಹಿನ್ನೆಲೆ ಶಮಿನಾ ಬಾನು ಕೈಕಾಲಿಗೆ ಪೆಟ್ಟಾಗಿದೆ. ಯುವತಿ ಬಿದ್ದ ಕೂಡಲೇ ಅಲ್ಲಿಯೇ ಇದ್ದ ಪ್ರವಾಸಿ ಮಿತ್ರರು, ಭದ್ರತಾ ಸಿಬ್ಬಂದಿ ತಕ್ಷಣ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಸ್ಟ್ರಕ್ಚರ್ ನಲ್ಲಿ ಕೋಟೆಯ ಮೇಲಿನಿಂದ ಕೆಳಗೆ ಕರೆತಂದಿದ್ದಾರೆ. ಗಾಯಾಳು ಶಮೀನಾ ಬಾನು ಅವರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಶಮೀನಾ ಬಾನುಗೆ ಚಿಕಿತ್ಸೆಯನ್ನು ನೀಡಲಿಸಿ ಚಿಕಿತ್ಸೆ ನೀಡಲಾಗಿದೆ. ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ವೀಕೆಂಡ್ ಅನ್ನು ಎಂಜಾಯ್ ಮಾಡಬೇಕೆಂದು ಬಂದಿದ್ದರು. ಕೋಟೆ ನೋಡುತ್ತಾ ಮಗ್ನರಾಗಿದ್ದರು. ಕೋಟೆಯಲ್ಲೆಲ್ಲಾ ಕಲ್ಲುಗಳು ಕೂಡ ಇದಾವೆ. ಗಮನ ಯಾವುದೋ ಕಡೆ ಹೋದಾಗ ಯುವತಿ ಕಾಲು ಜಾರಿ ಬಿದ್ದಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ಪಡೆದುಕೊಂಡು, ಹುಷಾರಾಗುತ್ತಿದ್ದಾರೆ.