ಚಿತ್ರದುರ್ಗ, (ಆ. 30) : ನಗರದ ಶ್ರೀ ಕಬೀರಾನಂದ ಸ್ವಾಮಿ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕಭೀರಾನಂದ ಸಂಸ್ಕೃತಿ ಪಾಠಶಾಲೆಯವತಿಯಿಂದ ವಿಶ್ವ ಸಂಸ್ಕೃತ ದಿನೋತ್ಸವದ ಅಂಗವಾಗಿ ನಗರದಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರಾವಣ ಮಾಸದ ಹುಣ್ಣಿಮೆಯಂದು ನಾಡಿನೆಲ್ಲಡೆ ವಿಶ್ವ ಸಂಸ್ಕೃತ ದಿನೋತ್ಸವವನ್ನು ಆಚರಣೆ ಮಾಡಲಾಗುತ್ತದೆ, ಸಂಸ್ಕೃತ ನಮ್ಮ ಪುರಾತನವಾದ ಭಾಷೆಯಾಗಿದೆ. ಇದರ ಬಳಕೆ ಇತ್ತಿಚೀನ ದಿನಮಾನದಲ್ಲಿ ಕಡಿಮೆಯಾಗುತ್ತಿದೆ ಇದನ್ನು ಎಲ್ಲರು ಸಹಾ ಕಲಿಯಬೇಕಿದೆ.
ಇದನ್ನು ಕಲಿಯುವುದರಿಂದ ನಮ್ಮ ಇತಿಹಾಸವನ್ನು ತಿಳಿದಂತೆ ಆಗುತ್ತದೆ.
ನಗರದ ಕರುವಿನಕಟ್ಟೆ ಬಳಿಯಲ್ಲಿನ ಕಭೀರಾನಂದ ಸಂಸ್ಕೃತಿ ಪಾಠ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಜಾಥಾದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸಂಸ್ಕøತವನ್ನು ಕಲಿಯಿರಿ ಸೇರಿದಂತೆ ಇತರೆ ಭೀತ್ತಿ ಪತ್ರಗಳನ್ನು ಹಿಡಿದು ಜಾಥಾದಲ್ಲಿ ಭಾಗವಹಿಸಿದ್ದರು.
ಜಾಥಾ ನಗರದ ಕಬೀರಾನಂದಾಶ್ರಮದ ಬಳಿಯಿಂದ ಪ್ರಾರಂಭವಾಗಿ ಫಿಲ್ಟರ್ ಹೌಸ್, ಏಕಣಾಥೇಶ್ವತಿ ಪಾದಗುಡಿ, ಉಚ್ಚಂಗಿ ಯಲ್ಲಮ್ಮ ದೇವಾಲಯ ದೊಡ್ಡಪೇಟೆ, ರಂಗಯ್ಯನ ಬಾಗಿಲು ಉಜ್ಜನಿ ಮಠ, ಕರುವಿನ ಕಟ್ಟೆ ವೃತ್ತವನ್ನು ಹಾದು ಮರಳಿ ಕಬೀರಾನಂದಾಶ್ರಮವನ್ನು ಸೇರಿದೆ.
ಈ ಕಾರ್ಯಕ್ರಮದಲ್ಲಿ ಸಂಸ್ಕೃತ ಶಾಲೆಯ ಮಖ್ಯೋಪಾಧ್ಯಾಯರಾದ ಗಣಪತಿ ಶಾಸ್ತ್ರಿ, ಸಹ ಶಿಕ್ಷಕರಾದ ಪಿ.ಕೆ.ಸುಮನ, ಆರ್.ಹೇಮಾವತಿ, ಸುಬ್ರಾರಾಯ್ ಭಟ್, ಮಂಜುನಾಥ್ ಸೇರಿದಣಂತೆ ಇತರರು ಭಾಗವಹಿಸಿದ್ದರು.