ಸುದ್ದಿಒನ್, ಚಿತ್ರದುರ್ಗ, (ಜು.17) : ನಗರದ ಬ್ಯಾಂಕ್ ಕಾಲೋನಿಯ ಸೇತುರಾಂ ಮನೆಯ ಬಳಿ ಅಹೋಬಲ ಲೇಔಟ್ ನಲ್ಲಿರುವ ನಜೀರ್ ಅಹಮದ್ ಇಬ್ರಾಹಿಂಸಾಬ್ ಎಂಬುವವರ ಮನೆಗೆ ನುಗ್ಗಿ ಇಬ್ಬರನ್ನು ಅಪಹರಿಸಿ ಮನೆಯಲ್ಲಿದ್ದ ಆಭರಣ ಮತ್ತು 50 ಲಕ್ಷ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಡಾವಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ನಗರದ ಬ್ಯಾಂಕ್ ಕಾಲೋನಿಯ ಸೇತುರಾಂ ಮನೆಯ ಬಳಿ ಅಹೋಬಲ ಲೇಔಟ್ ನಲ್ಲಿರುವ ನಜೀರ್ ಅಹಮದ್ ಇಬ್ರಾಹಿಂಸಾಬ್ ಎಂಬುವವರ ಮನೆಗೆ ನುಗ್ಗಿ ಇಬ್ಬರನ್ನು ಅಪಹರಿಸಿ ಮನೆಯಲ್ಲಿದ್ದ ಆಭರಣ ಮತ್ತು 50 ಲಕ್ಷ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಡಾವಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸೋಮವಾರ ನಗರದ ಎಸ್.ಪಿ. ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಆರೋಪಿಗಳನ್ನು ಬಿಹಾರ ಮೂಲದ
ಮಹಮ್ಮದ್ ಸಾಕೀಬ್ ಆಲಂ ಮತ್ತು ಬೆಂಗಳೂರು ಮೂಲದ ಸಮ್ಮು ಎಂದು ಗುರುತಿಸಲಾಗಿದೆ. ಮತ್ತು ಅವರಿಂದ ಲಕ್ಷಾಂತರ ಮೌಲ್ಯದ ನಗದು ಮತ್ತು ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ : ಜುಲೈ 08 ರಂದು ಬೆಳಗ್ಗೆ
ಸುಮಾರು 09:20 ರ ಸಮಯದಲ್ಲಿ ಬ್ಯಾಂಕ್ ಕಾಲೋನಿಯ ಸೇತುರಾಂ ಮನೆಯ ಬಳಿ ಅಹೋಬಲ ಲೇಔಟ್ ನಲ್ಲಿರುವ ನಜೀರ್ ಅಹಮದ್ ಇಬ್ರಾಹಿಂಸಾಬ್ ಅವರ ಮನೆಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ಮೂವರು ದುಷ್ಕರ್ಮಿಗಳು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆಗೆ ನುಗ್ಗಿ ನಜೀರ್ ಅಹಮದ್ ಮತ್ತು ಆತನ ಕುಟುಂಬದವರನ್ನು ಹೆದರಿಸಿ,
50 ಲಕ್ಷ ಹಣಕ್ಕಾಗಿ ಬೇಡಿಕೆಯನ್ನಿಟ್ಟಿದ್ದಾರೆ.
ಅಷ್ಟೇ ಅಲ್ಲದೇ ಅವರನ್ನು ಮನೆಯ ಬೆಡ್ ರೂಂನಲ್ಲಿ ಕೂಡಿ ಹಾಕಿ ಮನೆಯಲ್ಲಿದ್ದ
ಬಂಗಾರದ ಆಭರಣಗಳನ್ನು ದೋಚಿ, ಹಣಕ್ಕಾಗಿ ಬೇಡಿಕೆಯನ್ನಿಟ್ಟು ಮನೆಯಲ್ಲಿದ್ದ ಸಮೀರ್ ಅಹಮದ್ ಮತ್ತು
ಷಾಜಹಾನ್ ರವರನ್ನು ತಮ್ಮ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ, 50 ಲಕ್ಷ ಹಣವನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತು ನಜೀರ್ ಅಹಮದ್ ಇಬ್ರಾಹಿಂಸಾಬ್ ರವರು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಈ ದೂರಿನ ಮೇರೆಗೆ ಸುಲಿಗೆಕೋರರು ಮತ್ತು ಅಪಹರಣಕಾರರ ಪತ್ತೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ,
ಹೆಚ್ಚುವರಿ ಪೊಲೀಸ್ ಅಧೀಕ್ಷಕರರಾದ ಎಸ್.ಜೆ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ
ಉಪವಿಭಾಗದ ಡಿ.ವೈ.ಎಸ್.ಪಿ ಅನಿಲ್‍ಕುಮಾರ್.ಹೆಚ್.ಆರ್, ನೇತೃತ್ವದಲ್ಲಿ ನಯೀಂ ಅಹಮದ್, ಪೊಲೀಸ್ ವೃತ್ತನಿರೀಕ್ಷಕರು, ಬಡಾವಣೆ ವೃತ್ತ, ರಘು,
ಪಿಎಸ್‍ಐ, ಬಡಾವಣೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಯವರನ್ನು ಒಳಗೊಂಡ ತಂಡವನ್ನು ರಚಿಸಿರುತ್ತಾರೆ.
ಈ ತಂಡವು ಅಪಹರಣ ಮತ್ತು ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ
1) 48,53,900 ರೂಪಾಯಿ ನಗದು ಹಣ.
2) 185.600 ಗ್ರಾಂ ತೂಕದ ಅಂದಾಜು 9,28,000 ರೂಪಾಯಿ ಬೆಲೆ ಬಾಳುವ ವಿವಿಧ ನಮೂನೆಯ ಬಂಗಾರದ ಆಭರಣಗಳು.
3) 345 ಗ್ರಾಂ ತೂಕದ ಅಂದಾಜು 74,150 ರೂಪಾಯಿ ಬೆಲೆ ಬಾಳುವ ವಿವಿಧ ನಮೂನೆಯ ಬೆಳ್ಳಿಯ ಆಭರಣಗಳು.
4) ಕೃತ್ಯಕ್ಕೆ ಬಳಸಿದ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಅಂದಾಜು 7,30,000/-ರೂ. ಬೆಲೆ ಬಾಳುವ ಕಾರು.
5) ಹಿರಿಯೂರು ನಗರ ಠಾಣೆ ಕೇಸಿಗೆ ಸಂಬಂದಿಸಿದ 762 ಗ್ರಾಂ ತೂಕದ ಅಂದಾಜು 53,340 ರೂಪಾಯಿ ಬೆಲೆ ಬಾಳುವ ವಿವಿಧ ನಮೂನೆಯ ಬೆಳ್ಳಿ-ಆಭರಣಗಳು ಸೇರಿದಂತೆ ಒಟ್ಟು 66,39,390 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಡಾವಣೆ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ ಅವರು ಶ್ಲಾಘಿಸಿರುತ್ತಾರೆ.
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 25 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ, ಫೆಬ್ರವರಿ. 25 ) ಹತ್ತಿ…
ಸುದ್ದಿಒನ್ :ಭಾರತದಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಬಹಳ…
ಅಂತೂ ಇಂತೂ ಈ ರಾಶಿಯವರದು ಮದುವೆಯಾಯಿತು, ಈ ರಾಶಿಯವರಿಗೆ ಉದ್ಯೋಗದ ವರ್ಗಾವಣೆಯಿಂದ ಸಂತಸ, ಮಂಗಳವಾರದ ರಾಶಿ ಭವಿಷ್ಯ 25 ಫೆಬ್ರವರಿ…
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…