ನವದೆಹಲಿ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 12 ಜನ ಸಾವನ್ನಪ್ಪಿದ್ದರು. ಆ ಹೆಲಿಕಾಪ್ಟರ್ ದುರಂತವನ್ನ ಯಾರು ಮರೆಯುವಂತೆ ಇಲ್ಲ. ನಮ್ಮ ದೇಶಕ್ಕೆ ತುಂಬಾ ಮುಖ್ಯವಾದವರನ್ನ ಕಳೆದುಕೊಂಡ ಘಟನೆ ಅದು. ಇದೀಗ ಹೆಲಿಕಾಪ್ಟರ್ ದುರಂತಕ್ಕೆ ಕಾರಣ ಏನೆಂಬುದು ತಿಳಿದು ಬಂದಿದೆ.
ಹೆಲಿಕಾಪ್ಟರ್ ದುರಂತಕ್ಕೆ ಅವರಿದ್ದ ಹೆಲಿಕಾಪ್ಟರ್ ನ ದೋಷವೇ ಕಾರಣ ಎನ್ನಲಾಗಿದೆ. ಪೈಲಟ್‌ನ ಸಂಪೂರ್ಣ ನಿಯಂತ್ರಣದಲ್ಲಿರುವಾಗ ಹೆಲಿಕಾಪ್ಟರ್ ಅಜಾಗರೂಕತೆಯಿಂದ ಭೂಪ್ರದೇಶ ಅಥವಾ ನೀರು ಅಡಚಣೆಯಿಂದ ಈ ದುರಂತ ಸಂಭವಿಸಿದೆ ಎಂದು ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ತಿಳಿಸಿದೆ.
ಹೆಲಿಕಾಪ್ಟರ್ ದುರಂತವಾದ ಸಮಯದಲ್ಲಿ ಮಂಜು ಕವಿದ ವಾತಾವರಣವಿತ್ತು. ಹೀಗಾಗಿ ಸಮರ್ಪಕವಾಗಿಕಾರ್ಯ ನಿರ್ವಹಿಸಲು ಆಗಲಿಲ್ಲವಾದ್ದರಿಂದ ಈ ಅಪಘಾತ ಸಂಭವಿಸಿದೆ. ಉನ್ನತ ಹೆಲಿಕಾಪ್ಟರ್ ಪೈಲಟ್ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಇದೀಗ ತನಿಖೆಯ ಬಳಿಕ ವರದಿ ಬಂದಿದ್ದು, ದೋಷವೇ ಕಾರಣ ಎನ್ನಲಾಗಿದೆ.