ಬೆಂಗಳೂರು: ಬಕ್ರೀದ್ ಹಬ್ಬದ ಸಂದರ್ಭದಲ್ಲಿ 707 ಜಾನುವಾರು ರಕ್ಷಣೆ ಮಾಡಲಾಗಿದೆ. ರಾಜ್ಯಾದ ವಿವಿಧೆಡೆ ಗೊಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ ಹಿನ್ನೆಲೆ 60 FIR ಪ್ರಕರಣಗಳು ದಾಖಲಾಗಿದ್ದು,67 ಜನರ ಬಂಧನ ಮಾಡಲಾಗಿದೆ. ಇದರಲ್ಲಿ 551 ಗೋವುಗಳು, 144 ಎಮ್ಮೆ-ಕೋಣ, 12 ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಿದ ಗೋವುಗಳನ್ನ ಗೋಶಾಲೆಗೆ ರವಾನೆ ಮಾಡಲಾಗಿದೆ.
ಕಲಬುರಗಿಯಲ್ಲಿ ಅತಿ ಹೆಚ್ಚು ಗೋವುಗಳ ರಕ್ಷಣೆ ಮಾಡಲಾಗಿದೆ. ಕಲಬುರಗಿಯಲ್ಲಿ 193 ಗೋವು, 4 ಎಮ್ಮೆ ರಕ್ಷಣೆಯಾಗಿದೆ. ಬೀದರ್ ಜಿಲ್ಲೆಯಲ್ಲಿ 92 ಗೋವು ಮತ್ತು 35 ಎಮ್ಮೆ. ತುಮಕೂರು ಜಿಲ್ಲೆಯಲ್ಲಿ 90 ಗೋವು ಮತ್ತು 20 ಎಮ್ಮೆ. ಬೆಂಗಳೂರು ನಗರದಲ್ಲಿ 66 ಗೊವು ಮತ್ತು 11 ಎಮ್ಮೆ, ಮೈಸೂರು ಜಿಲ್ಲೆಯಲ್ಲಿ 33 ಗೋವು, 15 ಎಮ್ಮೆ. ಹಾವೇರಿ ಜಿಲ್ಲೆಯಲ್ಲಿ 23 ಎಮ್ಮೆ, 2 ಗೋವು, ಕೋಲಾರದಲ್ಲಿ 21 ಗೋವು, ರಾಯಚೂರಿನಲ್ಲಿ 26 ಎಮ್ಮೆ, ಹಾಸನ 19, ಚಿಕ್ಕಬಳ್ಳಾಪುರದಲ್ಲಿ 10 ಎಮ್ಮೆ, ಚಿತ್ರದುರ್ಗ 7, ಉಡುಪಿ 6, ಶಿವಮೊಗ್ಗ 2, ಬೆಂಗಳೂರು ಗ್ರಾಮಾಂತರ 6, ದಕ್ಷಿಣ ಕನ್ನಡ 21 ಗೋವುಗಳ ರಕ್ಷಣೆಯಾಗಿದೆ. ಉತ್ತರ ಕನ್ನಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 6 ಒಟ್ಟು 12 ಒಂಟೆಗಳನ್ನು ರಕ್ಷಣೆ..
ಕಲಬುರಗಿ ಜಿಲ್ಲೆಯಲ್ಲಿ 16 ಪ್ರಕರಣ ದಾಖಲಿಸಿ, 18 ಜನರನ್ನು ಬಂಧನ ಮಾಡಲಾಗಿದೆ. ಬೀದರ್ ಜಿಲ್ಲೆಯಲ್ಲಿ 7 ಪ್ರಕರಣ ದಾಖಲಿಸಿ 6 ಜನರ ಬಂಧನ. ತುಮಕೂರು ಜಿಲ್ಲೆಯಲ್ಲಿ 5 ಪ್ರಕರಣ ದಾಖಲಿಸಿ 6 ಜನರನ ಬಂಧನ. ಗೊಹತ್ಯೆ ಕಾಯ್ದೆ ಬಂದ ನಂತರ ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಗೊವುಗಳ ರಕ್ಷಣೆ, ೧೦೦ ಪ್ರಕರಣ ದಾಖಲಾಗಿದೆ.