ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ: ಕ್ಯಾನ್ಸರ್ ರೋಗಿಗಳು ಭಯ ಬೀಳದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದಾಗ ಗುಣಮುಖರಾಗಬಹುದು ಎಂದು ಡಾ.ದೀಪ್ತಿರಾವ್ ಹೇಳಿದರು.
ರೋಟರಿ ಕ್ಲಬ್ ಚಿತ್ರದುರ್ಗ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ, ಇನ್ನರ್‍ವೀಲ್ ಕ್ಲಬ್, ಇನ್ನರ್‍ವೀಲ್ಹ್ ಫೋರ್ಟ್ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ಯಾನ್ಸರ್ ರೋಗ ಏಕೆ, ಹೇಗೆ ಬರುತ್ತದೆ. ಹೇಗೆ ಗುಣಪಡಿಸಬಹುದು ಎನ್ನುವ ಜಾಗೃತಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ಕ್ಯಾನ್ಸರ್ ರೋಗಕ್ಕೆ ತುತ್ತಾದ ಕೂಡಲೆ ಸಾವಿಗೆ ಆಹ್ವಾನ ಎಂದುಕೊಂಡು ಅಧೀರರಾಗುವುದು ಬೇಡ. ಯಾರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎನ್ನುವ ಅರಿವಿರಬೇಕು. ಆಗ ಮಾತ್ರ ಕ್ಯಾನ್ಸರನ್ನು ಗುಣಪಡಿಸಿಕೊಳ್ಳಬಹುದು. ಹತ್ತು ಮಂದಿ ಕ್ಯಾನ್ಸರ್ ಪೀಡಿತರಲ್ಲಿ ಒಂದಿಬ್ಬರು ಸಾಯಬಹುದು ಅಷ್ಟೆ ಉಳಿದವರೆಲ್ಲಾ ವಾಸಿಯಾಗಿ ಮೊದಲಿನಂತೆ ಜೀವಿಸಬಹುದು ಎಂದು ಬಾಲಕಿಯರಲ್ಲಿ ಜಾಗೃತಿ ಮೂಡಿಸಿದರು.
ರೋಟರಿ ಕ್ಲಬ್ ಚಿನ್ಮುಲಾದ್ರಿ ಅಧ್ಯಕ್ಷ ರೊ.ಈ.ಅರುಣ್‍ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷೆ ಮಾಧುರಿ ಮಧುಪ್ರಸಾದ್, ಇನ್ನರ್‍ವೀಲ್ಹ್ ಕ್ಲಬ್ ಅಧ್ಯಕ್ಷೆ ಮಾಲಾ ನಾಗರಾಜ್, ಇನ್ನರ್‍ವೀಲ್ಹ್ ಫೋರ್ಟ್ ಅಧ್ಯಕ್ಷೆ ವರಲಕ್ಷ್ಮಿ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ಹೆಚ್.ನಾಗರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.