ಚಿಕ್ಕಬಳ್ಳಾಪುರ: ಚಾಲಕನ ಯಡವಟ್ಟಿನಿಂದಾಗಿ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಪರಿಣಾಮ ಬಸ್ ನಲ್ಲಿದ್ದ 30ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಚಿಂತಾಮಣಿ ತಾಲೂಕಿನ ಅಮಿಟಗಾಹಳ್ಳಿಯಲ್ಲಿ ನಡೆದಿದೆ.
ಭಾರತಿ ಎಂಬ ಖಾಸಗಿ ಬಸ್ ಹಿಂದೂಪುರದಿಂದ ತಿರುಪತಿಗೆ ತೆರಳುತ್ತಿತ್ತು. ಈ ವೇಳೆ ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತ ಬಸ್ ಚಲಾಯಿಸುತ್ತಿದ್ದ. ಬಸ್ ನಲ್ಲಿ 45ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ಚಾಲಕನ ಮೊಬೈಲ್ ಬಳಕೆಯಿಂದ ನಿಯಂತ್ರಣ ತಪ್ಪಿ, ಬಸ್ ರಸ್ತೆ ಬದಿ ಉರುಳಿಬಿದ್ದಿದೆ.
ಪರಿಣಾಮ ಬಸ್ ನಲ್ಲಿದ್ದ 30 ಜನರಿಗೆ ಗಾಯಗಳಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇನ್ನು ಕೆಲವರಿಗೆ ಕಣ್ಣು, ಬೆನ್ನುಮೂಳೆ, ಕೈ ಕಾಲು ಪೆಟ್ಟಾಗಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.