ಗದಗ: ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಅ ವೇಳೆ ಕೆಲವು ನೌಕರರನ್ನು ಇಲಾಖೆ ವಜಾಗೊಳಿಸಿತ್ತು. ಇದೀಗ ಆ ನೌಕರಿರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮತ್ತೆ ಕೆಲಸಕ್ಕೆ ವಾಪಾಸ್ ಕರೆಸಿಕೊಳ್ಳುವ ಬಗ್ಗೆ ಅನುಮತಿ ನೀಡಲಾಗಿದೆ.
ಈ ಸಂಬಂಧ ಮಾತನಾಡಿದ ಸಚಿವ ಶ್ರೀರಾಮುಲು, ಮುಷ್ಕರದ ಸಂದರ್ಭದಲ್ಲಿ ಕೆಲವು ನೌಕರರು ಕೆಲಸಕ್ಕೆ ಗೈರಾಗಿದ್ದರು. ಅಂಥಹ ನೌಕರರನ್ನು ಸಾರಿಗೆ ಇಲಾಖೆ ವಜಾ ಮಾಡಿತ್ತು. ವಜಾ ಆಗಿದ್ದವರನ್ನ ಇಲ್ಲಿಯವರೆಗೂ ಮರು ನೇಮಕ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಲೋಕ ಅದಾಲತ್ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲಾಗುತ್ತೆ. ಮಾನವೀಯತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದಾರೆ.
4 ವಾರದೊಳಗೆ ವಜಾಗೊಂಡ ನೌಕರರನ್ನ ಮರು ನೇಮಕ ಮಾಡಿಕೊಳ್ಳಲು ಸರ್ಕಾರ ಆದೇಶ ನೀಡಿದೆ. ಹೀಗಾಗಿ ನಾಲ್ಕೂ ವಿಭಾಗಗಳ ಎಂಡಿಗೆ ಶ್ರೀರಾಮು ಸೂಚನೆ ನೀಡಿದ್ದಾರೆ. ಕೆಲಸ ಕಳೆದುಕೊಂಡ ನೌಕರರು ಈ ಸುದ್ದಿಯಿಂದ ರಿಲ್ಯಾಕ್ಸ್ ಆಗಿದ್ದಾರೆ.