ಚಿಕ್ಕಬಳ್ಳಾಪುರ : ಜನೋತ್ಸವ ಕಾರ್ಯಕ್ರಮ ನಡೆಸಲು ಬಿಜೆಪಿ ಯಾವಾಗ ಫ್ಲ್ಯಾನ್ ಮಾಡಿಕೊಂಡರು ಅದು ಮುಂದೂಡಿಕೆಯಾಗುತ್ತಿತ್ತು. ಈಗಾಗಲೇ ಮೂರು ಬಾರಿ ಜನೋತ್ಸವ ಕಾರ್ಯಕ್ರಮ ಮುಂದೂಡೊಕೆಯಾಗಿದೆ. ಇದೀಗ ಬಿಜೆಪಿ ಕಾರ್ಯಕ್ರಮದ ಹೆಸರನ್ನೇ ಬದಲಾಯಿಸಿದೆ. ಜನೋತ್ಸವ ಬದಲಿಗೆ ಜನಸ್ಪಂದನ ಎಂಬ ಹೆಸರಿಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸಚಿವ ಉಮೇಶ್ ಕತ್ತಿ ಅವರ ನಿಧನದಿಂದ ಎಲ್ಲರೂ ದುಃಖಿತರಾಗಿದ್ದಾರೆ. ಒಂದು ರೀತಿಯ ಶಾಕ್ ನಲ್ಲಿದ್ದಾರೆ. ಅವರಿಗೆ ಗೌರವ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಮಾಡಲಾಗುತ್ತಿದೆ. ನಿನ್ನೆ ಈ ಸಂಬಂಧ ಶಾಸಕ ಮುನಿರತ್ನ ಮಾತನಾಡಿ, ಜನೋತ್ಸವ ಕಾರ್ಯಕ್ರಮವನ್ನು ಭಾನುವಾರಕ್ಕೆ ಮುಂದೂಡಲಾಗಿದೆ ಎಂದಿದ್ದರು.
ಆದರೆ ಇದೀಗ ಪಕ್ಷದ ಮುಖಂಡರೆಲ್ಲ ಸೇರಿ ಕಾರ್ಯಕ್ರಮವನ್ನು ಒಂದು ದಿನ ಮುಂಚಿತವಾಗಿ ನಡೆಸಲು ತೀರದಮಾನಿಸಿದ್ದಾರೆ. ಜನಸ್ಪಂದನ ಎಂದು ಮರುನಾಮಕರಣ ಮಾಡಿ ಶನಿವಾರವೇ ಕಾರ್ಯಕ್ರಮ ಮಾಡಲಿದ್ದಾರೆ. ಈ ದ್ವಂದ್ವ ನಿರ್ಧಾರದಿಂದ ಕಾರ್ಯಕ್ರಮಕ್ಕೆ ಹೋಗುವ ಜನ ಕೂಡ ಗೊಂದಲಕ್ಕೀಡಾಗಿದ್ದಾರೆ.