ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರು ನಾಳೆಯಿಂದ ಪಾದಯಾತ್ರೆ ಶುರು ಮಾಡಲಿದ್ದಾರೆ. ಅವರ ಪಾದಯಾತ್ರೆ ಬಗ್ಗೆ ಬಿಜೆಪಿ ನಾಯಕರು ಯಾವಾಗಲೂ ವ್ಯಂಗ್ಯವಾಡುತ್ತಿದ್ದಾರೆ. ಇದೀಗ ಮತ್ತೆ ಸಿಟಿ ರವಿ ಹಾಗೂ ಸಚಿವ ಈಶ್ವರಪ್ಪ ಅವರು ವ್ಯಂಗ್ಯವಾಡಿದ್ದಾರೆ.
ಸುಲಭದ ಕೆಲಸಕ್ಕೆ ಕಾಂಗ್ರೆಸ್ಸಿಗರು ಕಷ್ಟಪಡುತ್ತಿದ್ದಾರೆ. ಮೇಕೆದಾಟುವಿಗೆ ಬಿಜೆಪಿ ಅಡ್ಡಿಯಾಗಿಲ್ಲ. ಕೇಂದ್ರವೂ ಇದಕ್ಕೂ ಒಪ್ಪಿಗೆ ಇದೆ. ಮೇಕೆದಾಟು ಯೋಜನೆಗೆ ಅಡ್ಡಿಯಾಗಿರೋದು ತಮಿಳುನಾಡು ಸರ್ಕಾರ. ಮೊದಲು ಕಾಂಗ್ರೆಸ್ ನವರು ತಮಿಳು ನಾಡು ಸರ್ಕಾರದ ಕಾಂಗ್ರೆಸ್ ನಾಯಕರ ಮನವೊಲಿಸಲು ಯತ್ನಿಸಬೇಕು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ ಅವರ ಮಾತನ್ನ ತಮಿಳುನಾಡಿನವರು ಕೇಳುತ್ತಾರೆ.
ಒಂದು ಕಾಲದಲ್ಲಿ ಪ್ರಧಾನಿ ಹುದ್ದೆಗೆ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬಂದಿತ್ತು. ತಮಿಳುನಾಡಿನ ಸರ್ಕಾರದವರ ಮನವೊಲಿಸಿದ್ರೆ ಪಾದಯಾತ್ರೆ ಮಾಡುವ ಅಗತ್ಯವೇ ಇಲ್ಲ. ನಿಯಮ ಉಲ್ಲಂಘಿಸೋದು, ಕೊರೊನಾ ವೈರಸ್ ಬರಿಸಿಕೊಳ್ಳುವುದು ಇದೆಲ್ಲವೂ ತಪ್ಪುತ್ತೆ. ಹೂ ಎತ್ತಿದ್ದಷ್ಟು ಸುಲಭದಲ್ಲಿ ಆಗುವ ಕೆಲಸಕ್ಕೆ ಕೊಡಲಿ ಏಕೆ..? ಅಪ್ಪಾ ಸಾಯಬೇಡ್ರಿ ಅಂತೀವಿ ಇಲ್ಲ ಸಾಯೊಇರೆ ಅಂತ ಚಂಡಿ ಹಟಡ ಹಿಡಿದ್ರೆ ನಾವೇನು ಮಾಡೋಣಾ ಎಂದು ಶಿವಮೊಗ್ಗದಲ್ಲಿ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.