ಪಣಜಿ: ಸಿದ್ದರಾಮಯ್ಯ ಅವರ ಫೋಟೊ ಹಾಕಿ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಎಂದು ಸಿ ಟಿ ರವಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆ ವಿಚಾರಕ್ಕೆ ಸಿ ಟಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಇಂಥ ಸಿಟ್ಟಿಗೆ ನನ್ನ ಬಳಿ ಯಾವುದೇ ಉತ್ತರವಿಲ್ಲ ಎಂದಿದ್ದಾರೆ.
ಗೋವಾದಲ್ಲಿ ಮಾತನಾಡಿದ ಸಿ ಟಿ ರವಿ, ಕಂಬಳಿ ಹಾಕಲು ಕುರುಬರೇ ಆಗಬೇಕೆಂಬುದು ನಿಮ್ನ ವಾದ. ಆದರೇ ಮುಸ್ಲೀಂ ಟೋಪಿಯನ್ನ ಯಾರಾದರೂ ಹಾಕಬಹುದೇ..? ಸಿಎಂ ಕಂಬಳಿ ಹಾಕಿದ್ದನ್ನ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ. ಅದನ್ನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರಶ್ನಿಸಿದ್ದಾರೆ. ಕಂಬಳಿ ಹಾಕಲು ಕುರುಬರೇ ಆಗಬೇಕೆಂದಿಲ್ಲ ಎಂದಿದ್ದಾರೆ. ಅದನ್ನೇ ನಾನು ಪ್ರಶ್ನಿಸಿದ್ದು ಅಂತ ಸಮರ್ಥನೆ ನೀಡಿದ್ದಾರೆ.
ಕೆಲವರಿಗೆ ಅವರದೇ ದಾಟಿಯಲ್ಲಿ ಎದುರಿಗೆ ಇರುವವರು ಪ್ರಶ್ನಿಸಿದಾಗ ಸಿಟ್ಟು ಬರುತ್ತೆ. ಯಾರು ಯಾವ ಸ್ಥಾನಕ್ಕೆ ಬೇಕಾದರೂ ಹೋಗಬಹುದು. ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕನ್ನ ನೀಡಿದೆ. ನಾನು ಅದರ ಆಧಾರದ ಮೇಲೆಯೇ ಮಾತಾಡಿದ್ದೇನೆ. ಯಾರ ಮನಸ್ಸಿಗೂ ನೋವುಂಟು ಮಾಡುವ ಉದ್ದೇಶ ನನ್ನದಲ್ಲ ಎಂದಿದ್ದಾರೆ.