ಬೆಂಗಳೂರು: ಪ್ರಧಾನಿ ಮೋದಿ ಅವರ ಹುಟ್ಟಿದ ದಿನ ಬಂದೇ ಬಿಟ್ಟಿದೆ. ನಾಳೆ ಅಂದ್ರೆ ಸೆಪ್ಟೆಂಬರ್17ರಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ. ಕಳೆದ ಬಾರಿ ಭಾರತಕ್ಕೆ ಹುಟ್ಟುಹಬ್ಬದ ವಿಶೇಷವಾಗಿ ಚೀತಾಗಳನ್ನು ತರಿಸಲಾಗಿತ್ತು. ಈ ವರ್ಷ ಮೋದಿ ಅವರ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿಸಲು ಬಿಜೆಪಿ ತಯಾರಿ ನಡೆಸಿದೆ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 16 ದಿನಗಳ ಕಾಲ ಕಾರ್ಯಕ್ರಮದ ರೂಪಿಸಲಾಗಿದೆ.
ಪ್ರಧಾನಿ ಮೋದಿಯವರು 73ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಸಂಧರ್ಭವನ್ನು ಬಿಜೆಪಿ ಪಕ್ಷ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರವರೆಗೆ ಕಾರ್ಯಕ್ರಮ ಮಾಡಲು ಯೋಜಿಸಲಾಗಿದೆ. ಸೇವಾ ಹೀ ಎಂಬ ಹೆಸರಿನಲ್ಲಿ ಹದಿನಾರು ದಿನಗಳ ಕಾಲ ಕಾರ್ಯಕ್ರಮ ಆಯೋಜನೆ ಮಾಡಿದೆ. ಗಾಂಧಿ ಜಯಂತಿಯಂದು ಈ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಮ್ ಚುಗ್, ವಿನೋದ್ ತಾವ್ಡೆ, ಸುನಿಲ್ ಬನ್ಸಾಲ್, ಸಂಜಯ್ ಬಂಡಿ ಮತ್ತು ಕೈಲಾಶ್ ವಿಜಯವರ್ಗಿಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮದ ಸಿದ್ಧತೆಗಳ ಸಭೆ ನಡೆಯಿತು. ಈ ಕಾರ್ಯಕ್ರಮದ ಅಡಿಯಲ್ಲಿ ಪಕ್ಷವು ಜಿಲ್ಲಾ ಮಟ್ಟದಲ್ಲಿ ಪ್ರಧಾನಿ ಮೋದಿಯವರ ಪ್ರದರ್ಶನಗಳನ್ನು ಆಯೋಜಿಸಿತ್ತು. ಬಿಜೆಪಿಯು ಸೆಪ್ಟೆಂಬರ್ 25 ರಂದು ದೀನದಯಾಳ್ ಉಪಾಧ್ಯಾಯ ಜಯಂತಿ ಮತ್ತು ಅಕ್ಟೋಬರ್ 2 ರಂದು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಸೇವಾ ಪಖ್ವಾಡಾ ಎಂದು ಆಚರಿಸಲಿದೆ. ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ವಿಶೇಷವಾಗಿಸಲು ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ.