ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ, ಪ್ರತಿಭೆ ಅನಾವರಣವಾದಂತೆ ತಾಳ್ಮೆಯ ಕಟ್ಟೆ ಒಡೆದು, ಕೋಪವೂ ಅನಾವರಣವಾಗುತ್ತಾ ಇರುತ್ತದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಹಲವು ವಿಚಾರಗಳು ಗಮನ ಸೆಳೆದವು. ಅದರಲ್ಲೂ ಎಲ್ಲರ ಮನೆಯವರು ಬಂದು ಮಕ್ಕಳ ಜೊತೆ ಸಮಯ ಕಳೆದರು. ವಾರಪೂರ್ತಿ ಬಿಗ್ ಬಾಸ್ ಸ್ಪರ್ಧಿಗಳ ಮನಸ್ಸು ಉಲ್ಲಾಸದಿಂದ ಕುಣಿದಾಡುತ್ತಾ ಇತ್ತು. ಸುಮಾರು 69 ದಿನಗಳ ಕಾಲ ಮನೆಯೊಳಗೆ ಅವರವರೇ ಇದ್ದು, ಈಗ ಒಬ್ಬೊಬ್ಬರೆ ಅದರಲ್ಲೂ ಮನೆ ಮಂದಿ ಬರುತ್ತಿದ್ದಾಗ ಖುಷ ಆಗದೆ ಇರುತ್ತದೆಯೆ.
ಮನೆ ಮಂದಿ ಬಂದಿದ್ದು ಒಂದು ವಿಚಾರವಾದರೆ ಇನ್ನು ಹಾಲಿಗಾಗಿ ನಡೆದ ಕಿತ್ತಾಟ. ಬಿಗ್ ಬಾಸ್ ಎಲ್ಲರಿಗೂ ಒಂದೊಂದು ಪ್ಯಾಕೆಟ್ ಹಾಲನ್ನು ಕಳುಹಿಸಿತ್ತು. ಒಟ್ಟಿಗೆ ಟೀ ಮಾಡಿದರೆ ಮೊಸರು ಮಾಡುವುದಕ್ಕೂ ಅನುಕೂಲವಾಗುತ್ತದೆ ಎಂದು ಎಲ್ಲರೂ ಚರ್ಚೆಯಲ್ಲಿದ್ದರು. ಆಗ ಅಮೂಲ್ಯ ನನಗೆ ನನ್ನ ಒಂದು ಪ್ಯಾಕ್ ಕೊಟ್ಟು ಬಿಡಿ. ಗಟ್ಟಿ ಹಾಲು ಬೇಕು ನೀರು ಹಾಕಿದರೆ ಆಗಲ್ಲ ಅಂದ್ರು. ಆಗ ರೂಪೇಶ್ ರಾಜಣ್ಣ ಹಾಗೂ ಸಂಬರ್ಗಿ ಅಪೋಸ್ ಮಾಡಿದ್ದರು.
ಇವತ್ತು ವಾರದ ಕಥೆ ಕಿಚ್ಚನ ಜೊತೆಯಲ್ಲಿ ಇಂದು ಮತ್ತೆ ಹಾಲಿನ ವಿಚಾರವನ್ನು ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿದ್ದಾರೆ. ಅಮೂಲ್ಯ ಅವರೇ ನಿಮಗೆ ಗಟ್ಟಿ ಹಾಲು ಬೇಕು. ನನ್ನ ಪ್ಯಾಕ್ ನನಗೆ ಕೊಡಿ. ನಿಮಗೆ ಹೊಂದಿಕೊಂಡು ಹೋಗುವುದಕ್ಕೆ ತೊಂದರೆಯಾಗುತ್ತಾ ಇದೆಯಾ ಎಂದು ಕೇಳಿದ್ದಾರೆ. ಆಗ ಅಮೂಲ್ಯ, ಸಿಗ್ತಾ ಇದ್ದದ್ದು ಒಂದು ಟೀ. ನಂಗೆ ಗಟ್ಟಿ ಹಾಲು ಬೇಕಿತ್ತು. ನಂಗೆ ಅದೆಲ್ಲ ಸುಪಿರಿಟಿ ಫಾರ್ಮಾಲಿಟಿಯ ಪರಮಾವಧಿ ಅನ್ನಿಸ್ತು ಎಂದು ಸಂಬರ್ಗಿ ಹೇಳಿದರೆ, ನಮ್ಗೆ ಬೇಕಾದಾಗ ಹಾಲನ್ನು ಎತ್ತಿಕೊಂಡು ಕುಡಿಯುತ್ತೀವಿ ಎಂದು ರಾಕಿ ಸಪೋರ್ಟ್ ಮಾಡಿದರು. ಬಳಿಕ ರಾಜಣ್ಣ, ನಾವೂ ಅಗ್ರಿ ಆದ್ವಿ ಸರ್ ನಾಳೆಯಿಂದ ಎಲ್ಲರು ಜೊತೆಗೆ ಕುಡಿಯೋಣಾ ಅಂತ ಎಂದಾಗ ಅಮೂಲ್ಯ ಆಕ್ರೋಶಗೊಂಡಿದ್ದಾರೆ. ಈ ಮನೆಯಲ್ಲಿ ಎಲ್ಲರು ಯಾವ ಮಟ್ಟಕ್ಕೆ ಒಟ್ಟಿಗೆ ಕೂತು ಕುಡಿಯುತ್ತಾರೆ ಎನ್ನೋದು ಅವರಿಗೆ ಗೊತ್ತು ಸರ್ ಎಂದಿದ್ದಾರೆ.
ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ…
ಚಿತ್ರದುರ್ಗ ಫೆ. 24 : ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಮಾ. 01…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರಾಗಿ…
ಚಿತ್ರದುರ್ಗ ಫೆ. 24 : ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ,…
ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…