ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಗರಿಗದರಿವೆ. ವಿಭಿನ್ನವಾಗಿ ಪ್ರಚಾರ ಕಾರ್ಯ ಶುರು ಮಾಡಿದ್ದು, ಜನರ ಗಮನ ಸೆಳೆಯಲು ಯಾತ್ರೆ ಹೊರಟಿವೆ. ಅದರಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದರೆ, ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ತೊಡಗಿದೆ. ಆದರೆ ಜೆಡಿಎಸ್ ಮಾತ್ರ ಏನನ್ನು ಪ್ರಚಾರ ಶುರು ಮಾಡಿಲ್ಲ.
ಎರಡು ಪಕ್ಷಗಳು ಏನೇ ಮಾಡಿದರು ಜೆಡಿಎಸ್ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಈ ಬಗ್ಗೆ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆಗಳು ಏನೇ ಹೇಳಿದರೂ ಈ ಬಾರಿ ಜನ ಜೆಡಿಎಸ್ ಗೆ ಅಧಿಕಾರ ನೀಡುತ್ತಾರೆ. ಇದೇ ತಿಂಗಳು 19 ಮತ್ತು 20 ರಂದು ಜೆಡಿಎಸ್ ಕಾರ್ಯಕರ್ತರಿಗೆ ಕಾರ್ಯಗಾರ ನಡೆಸಲಿದ್ದೇವೆ. ಈ ಹಿಂದೆ ಬಿಡದಿಯಲ್ಲಿ ಕೊಟ್ಟ ಟಾಸ್ಕ್ ಅನ್ನು ಏನು ಮಾಡಿದರು ಎಂಬುದನ್ನು ಕೇಳುತ್ತೇವೆ. ಚುನಾವಣೆಗೆ ಹೋಗುವುದಕ್ಕೆ ಏನೆಲ್ಲಾ ಕೆಲಸಗಳಣ್ನು ಮಾಡಬೇಕು ಎಂಬ ಸೂಚನೆಯನ್ನು ನೀಡುತ್ತೇವೆ ಎಂದಿದ್ದಾರೆ.
ಈ ಬಾರಿ ಕುಮಾರಸ್ವಾಮಿಗೆ ಅಧಿಕಾರ ಕೊಡಬೇಕು ಎಂಬುದು ಜನರ ಮನಸ್ಸಿನಲ್ಲಿದೆ. ಭಾರತ್ ಜೋಡೋ ಯಾತ್ರೆಯಾಘಲಿ, ಸಂಕಲ್ಪ ಜಾತ್ರೆಯಾಗಲಿ ಯಾವುದು ಯಶಸ್ವಿಯಾಗಲ್ಲ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಯಾರೋ ಮಾಡುವ ಸರ್ವೇ ನಮಗೆ ಮುಖ್ಯ ಅಲ್ಲ. ಈ ಬಾರಿ 123 ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಎಂದಿದ್ದಾರೆ.