ಬೆಳಗಾವಿ : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗ್ತಾ ಇದೆ. ಕೊರೊನಾ ಕಂಟ್ರೋಲ್ ಗೆ ರಾಜ್ಯ ಸರ್ಕಾರ ಸಾಕಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ. ಮಾಸ್ಕ್ ಹಾಕಿದ್ರೆ ಕೊರೊನಾ ಒಂದಂತಕ್ಕೆ ಹರಡುವಿಕೆ ತಪ್ಪುತ್ತೆ ಅನ್ನೋ ಉದ್ದೇಶದಿಂದ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಈ ಮಧ್ಯೆ ಮಾಸ್ಕ್ ಹಾಕದವರಿಗೆ ಅಧಿಕಾರಿಗಳು ದಂಡ ಕೂಡ ಹಾಕುತ್ತಿದ್ದಾರೆ. ಆದ್ರೆ ಸಚಿವರೇ ಮಾಸ್ಕ್ ಹಾಕದೆ, ಉಡಾಫೆ ಮಾತಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಸಚಿವ ಉಮೇಶ್ ಕತ್ತಿ ಅವರು ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾಸ್ಕ್ ಹಾಕಿರಲಿಲ್ಲ. ಇದನ್ನ ಪ್ರಶ್ನಿಸಿದ್ದಕ್ಕೆ ಮಾಸ್ಕ್ ಹಾಕುವುದು, ಬಿಡುವುದು ನನಗೆ ಬಿಟ್ಟಿದ್ದು, ನನಗೆ ಮಾಸ್ಕ್ ಹಾಕಬೇಕು ಅನ್ನಿಸಿಲ್ಲ. ಅದಕ್ಕೆ ಹಾಕಿಲ್ಲ ಎಂದಿದ್ದಾರೆ.
ನಿನ್ನೆ ರಾತ್ರಿ ಪ್ರಧಾನಿಮಂತ್ರಿ ತಿಳಿಸಿದ್ದಾರೆ. ಯಾವುದೇ ನಿರ್ಬಂಧ ವಿಧಿಸಲ್ಲ. ತಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಂಡು ಮಾಸ್ಕ್ ಹಾಕಿಕೊಳ್ಳಬೇಕು. ಅದು ಅವರಿಗೆ ಬಿಟ್ಟಿದ್ದು. ಇದರಿಂದಾಗಿ ನಾನು ಮಾಸ್ಕ್ ಹಾಕಲ್ಲ ಎಂದು ಹೇಳಿದರು. ಇದು ಜನರಿಗೆ ಕೋಪ ಬರುವಂತೆ ಮಾಡಿದೆ. ಜನ ಸಾಮಾನ್ಯರು ಮಾಸ್ಜ್ ಹಾಕಿಲ್ಲ ಎಂದರೆ ದಂಡ ವಿಧಿಸುತ್ತಾರೆ. ಸಚಿವರು ಹಾಕಿಲ್ಲ ಅಂದ್ರೆ ಕ್ರಮ ಇಲ್ಲವಾ ಎಂದು ಆಕ್ರೋಶಗೊಂಡಿದ್ದಾರೆ.