ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ.11 : ಹನ್ನೆರಡನೇ ಶತಮಾನದ ಭಕ್ತಿ ಭಂಡಾರಿ, ಕ್ರಾಂತಿಕಾರಿ, ಮಹಾನ್ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ವೀರಶೈವ ಸಮಾಜದಿಂದ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಸಾರೋಟಿನಲ್ಲಿ ಬಸವೇಶ್ವರರ ಬೃಹತ್ ಭಾವಚಿತ್ರದೊಂದಿಗೆ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟಿತು. ಸೋಮನ ಕುಣಿತ, ಗೊಂಬೆ ಕುಣಿತ, ವೀರಗಾಸೆ, ಕೀಲುಕುದುರೆ, ಉರುಮೆ, ತಮಟೆ, ಡೊಳ್ಳು ಮೆರವಣಿಗೆಯಲ್ಲಿ ಆಕರ್ಷಣೆಯಾಗಿತ್ತು. ಗಾಂಧಿ ವೃತ್ತದ ಮೂಲಕ ಆನೆಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಸಾಗಿದ ಮೆರವಣಿಗೆ ಗಾಂಧಿ ವೃತ್ತಕ್ಕೆ ಹಿಂದಿರುಗಿತು.
ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಗಾಣಿಗ ಮಠದ ಬಸವ ಕುಮಾರ ಸ್ವಾಮೀಜಿ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಉಪಾಧ್ಯಕ್ಷ ರಾಜು, ಸಹ ಕಾರ್ಯದರ್ಶಿ ಜಿತೇಂದ್ರ, ಖಜಾಂಚಿ ತಿಪ್ಪೇಸ್ವಾಮಿ, ನಿರ್ದೇಶಕ ಸಿದ್ದವ್ವನಹಳ್ಳಿ ಎಸ್.ಪರಮೇಶ್, ಕೆ.ಇ.ಬಿ.ಷಣ್ಮುಖಪ್ಪ, ಎಸ್.ವಿ.ಕೊಟ್ರೇಶ್, ಟಿ.ಸುರೇಶ್, ಎಸ್.ಜೆ.ಎಂ.ಕಾನೂನು ಕಾಲೇಜು ಪ್ರಾಂಶುಪಾಲರಾದ ಎಸ್.ದಿನೇಶ್, ಎಸ್.ವೀರೇಶ್, ಟಿ.ಎಸ್.ಮುರುಗನ್, ಜಿ.ಎನ್.ಮಲ್ಲಿಕಾರ್ಜುನಪ್ಪ, ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಂ.ಮಂಜುನಾಥ್, ಬಿ.ವಿ.ಕಾರ್ತಿಕ್, ಗಿರೀಶ್, ಮೋಕ್ಷ ರುದ್ರಸ್ವಾಮಿ, ರುದ್ರಾಣಿ ಗಂದಾಧರ್, ರೀನಾ ವೀರಭದ್ರಪ್ಪ, ಉಮಾ ಬಸವರಾಜ್, ನಿರ್ಮಲ ಬಸವರಾಜ್, ಮಹಾಂತಮ್ಮ ಇನ್ನು ಅನೇಕರು ಬಸವ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕೆಡಿಪಿ.ಸದಸ್ಯ ಕೆ.ಸಿ.ನಾಗರಾಜ್‍ರವರಿಗೆ ಗಾಂಧಿವೃತ್ತದಲ್ಲಿ ಬೃಹಧಾಕಾರವಾದ ಸೇಬು ಹಾಗೂ ಮೋಸಂಬಿ ಹಾರ ಹಾಕಲಾಯಿತು.