ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಡಿ.09): ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಟಿಸಿರುವ ವೇದ ಚಿತ್ರದ ಆಡಿಯೋ ಬಿಡುಗಡೆ ಡಿ.15 ರಂದು ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಹರ್ಷ ತಿಳಿಸಿದರು.
ಹಳೆ ಮಾಧ್ಯಮ ಶಾಲಾ ಆವರಣದಲ್ಲಿ ಶುಕ್ರವಾರ ವೀಕ್ಷಣೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿ.23 ಕ್ಕೆ ರಾಜ್ಯದ 250 ರಿಂದ 300 ಚಿತ್ರಮಂದಿರಗಳಲ್ಲಿ ವೇದ ಚಿತ್ರ ತೆರೆ ಕಾಣಲಿದೆ. ತೆಲುಗು, ತಮಿಳಿನಲ್ಲಿಯೂ ಚಿತ್ರ ಪ್ರದರ್ಶನಗೊಳ್ಳಲಿದ್ದು, ಸೌದಿ, ದುಬೈ, ಆಸ್ಟ್ರೇಲಿಯಾದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ನಟ ಶಿವರಾಜ್‍ಕುಮಾರ್ ಸೇರಿದಂತೆ ಇನ್ನು ಅನೇಕರು ಡಿ.15 ಕ್ಕೆ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆಂದು ಹೇಳಿದರು.
ಸಾಮಾಜಿಕ ಸಂದೇಶವಿರುವ ವೇದ ಚಿತ್ರದಲ್ಲಿ ಹಾಡು ಡ್ಯಾನ್ಸ್‍ಗಳಿವೆ. ಓಂ ಪ್ರೊಡಕ್ಷನ್ ಸಿನಿಮಾ ಮಾಡಲು ನನ್ನ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಬೆಂಗಳೂರು ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣವಾಗಿದ್ದು, ಕೇರಳದಲ್ಲಿಯೂ ಶೂಟಿಂಗ್ ನಡೆದಿದೆ. ಇದು ಶಿವರಾಜ್‍ಕುಮಾರ್‍ರವರ 125 ನೇ ಚಿತ್ರ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಸದಸ್ಯ ನಸ್ರುಲ್ಲಾ ಪತ್ರಿಕಾಗೋಷ್ಟಿಯಲ್ಲಿದ್ದರು.