ಚಿತ್ರದುರ್ಗ,(ಜು.20) : ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಶಾಲಾಹಂತದಲ್ಲಿ ಮೊದಲ ಹಂತದ ಸಹಪಠ್ಯೇತರ ಚಟುವಟಿಕಾ ಕಾರ್ಯಕ್ರಮ ನಡೆಯಿತು.
1 ರಿಂದ 10ನೇ ತರಗತಿಗಳಿಗೆ ಪಠ್ಯೇತರ ಚಟುವಟಿಕೆಗಳಾದ ಪ್ಯಾಮಿಲಿ ಷೋ, ಏಕಪಾತ್ರಾಭಿನಯ, ಅಗ್ನಿರಹಿತ ಅಡುಗೆ, ತರಕಾರಿಗಳ ಅಚ್ಚುಗಳನ್ನು ಬಳಸಿ ಚಿತ್ರ ಬಿಡಿಸುವುದು, ಪೆಬಲ್‍ಆರ್ಟ್(ಬೆಣಚುಕಲ್ಲು) ಬಳಸಿ ವಿದ್ಯಾರ್ಥಿಗಳು ವಿವಿಧ ರಿತಿಯ ಚಟುವಟಿಕೆಗಳನ್ನು ತರಗತಿ ಹಂತದಲ್ಲಿ ಏರ್ಪಡಿಸಿಲಾಯಿತು. ಮಕ್ಕಳು ಸ್ವಂತ ಪ್ರತಿಭೆಯನ್ನು ಹೊರ ತೆಗೆಯುವ ಒಂದು ಶಾಲಾ ಪ್ರ್ರಕ್ರಿಯಾಗಿದೆ.
ಸಹ ಪಠ್ಯೇತರ ಚಟುವಟಿಕಾ ಕಾರ್ಯಕ್ರಮಕ್ಕೆ ವಿಶೇಷವಾಗಿ ತೀರ್ಪುಗಾರರು ಮಕ್ಕಳ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಕಲೆಯನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ತೀರ್ಪನ್ನು ನೀಡಿದ್ದಾರೆ. ಮೊದಲ ಹಂತದ ಪಠ್ಯೇತರ ಚಟುವಟಿಕೆಗಳಲ್ಲಿ ಸ್ಪರ್ಧಿಸಿದ ಎಲ್ಲಾ ವಿದ್ಯಾರ್ಥಿಗಳ ಸೃಜನಾತ್ಮಕ ಕಲೆಯನ್ನು ಶ್ಲಾಫಿಸಿದರು.
ಶಾಲೆಯ ಪ್ರಾಂಶುಪಾಲರಾದ ಶ್ರಿಯುತ ಪ್ರಭಾಕರ್ ಎಮ್‍ಎಸ್ ಮಾತನಾಡಿ ವಿದ್ಯಾರ್ಥಿಗಳು ವರ್ಷವಡೀ ತರಗತಿ ಬೋಧನೆಯಲ್ಲಿ ನಿರತರಾಗಿರುವುದರಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆ ಇದಾಗಿದೆ. ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಸಹ ಪಠ್ಯೇತರ ಚಟುವಟಿಕೆ ಕಾರ್ಯಕ್ರಮಗಳು ಕೋ-ಆರ್ಡಿನೇಟರ್‍ಗಳು, ಬೋಧಕ ಮತ್ತು ಬೋಧಕೇತರ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.