ಧಾರವಾಡ: ಶಾಸಕ ಅರವಿಂದ್ ಬೆಲ್ಲದ್ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಇದರ ಹಿಂದೆ ಸಚಿವ ಸ್ಥಾನದ ಲಾಭಿ ಇರಬಹುದಾ ಎಂಬ ಲೆಕ್ಕಚಾರಗಳು ಕೇಳಿ ಬರುತ್ತಿವೆ. ಈ ಸಂಬಂಧ ಅವರೇ ಪ್ರತಿಕ್ರಿಯೆ ಕೊಟ್ಟಿದ್ದು, ಲಾಭಿಗೀಬಿ ಏನು ಇಲ್ಲ ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರ ಭೇಟಿ ಹಿಂದೆ ಲಾಭಿ ಎಲ್ಲಾ ಏನಿಲ್ಲ. ಆರು ತಿಂಗಳ ಹಿಂದೆಯೇ ಭೇಟಿಯಾಗಬೇಕು ಅಂದುಕೊಂಡಿದ್ದೆ. ಹಾಗಾಗಿ ಅವರ ಆಫೀಸ್ ಗೆ ಕರೆದು ಭೇಟಿ ಮಾಡಿದ್ದಾರೆ ಅಷ್ಟೇ. ಈ ಸಂದರ್ಭದಲ್ಲಿ ವಿಶೇಷವಾಗಿ ಏನು ಕೇಳಿಲ್ಲ. ಸುಮಾರು ಆರು ತಿಂಗಳ ಪ್ರಯತ್ನ ಇದು.
ಭೇಟಿ ವೇಳೆ ಪ್ರಸಕ್ತ ರಾಜಕೀಯದ ಸ್ಥಿತಿಗತಿ ಬಗ್ಗೆ ವಿಚಾರ ಮಾಡಿದ್ದರು. ನಮ್ಮ ಕ್ಷೇತ್ರದ ಅಭಿವೃದ್ಧಿ, ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡಿದರು ಅಷ್ಟೇ. ನಾನಂತು ಅವರಲ್ಲಿ ಏನನ್ನು ಕೇಳಲು ಹೋಗುವುದಿಲ್ಲ ಎಂದಿದ್ದಾರೆ.