ರಷ್ಯಾ ಉಕ್ರೇನ್ ಯುದ್ಧ ತೀವ್ರತೆ ಪಡೆಯುತ್ತಿದೆ. ರಷ್ಯಾ ಕೂಡ ಉಕ್ರೇನ್ ನಲ್ಲಿರುವ ಪ್ರಮುಖ ನಗರಗಳ ಮೇಲೆ ದಾಳಿ ಮಾಡ್ತಿದೆ. ಈ ಮಧ್ಯೆ ಅಲ್ಲಿರುವ ಭಾರತೀಯರನ್ನ ರಕ್ಷಿಸುವಲ್ಲಿ ಸರ್ಕಾರ ನಿರತ ಪ್ರಯತ್ನ ಮಾಡ್ತಿದೆ.
ಇದೀಗ ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ದಾಳಿ ಮುಂದುವರೆಸಿದೆ. ಈ ಹಿನ್ನೆಲೆ ಭಾರತೀಯ ವಿದ್ಯಾರ್ಥಿಗಳು ಭಾರತ ರಾಯಬಾರಿ ಎಚ್ಚರಿಕೆ ನೀಡಿದೆ. ಆದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ಹೋಗಿ ಎಂದು ರಾಯಭಾರಿ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಯಭಾರಿ, ರೈಲು, ವಿಮಾನ ಸೇರಿದಂತೆ ಯಾವ ಸೌಲಭ್ಯ ಸಿಗುತ್ತೆ. ಆ ಸೌಲಭ್ಯಗಳನ್ನ ಬಳಸಿಕೊಂಡು ಆದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ತಲುಪಿ ಎಂದು ನಿರ್ದೇಶನ ನೀಡಿದೆ.