ನವದೆಹಲಿ: ಕೊರೊನಾ ಮೂರನೆಯ ಅಲೆಯ ಭಯವಿಲ್ಲ ಎಂಬ ಧೈರ್ಯ ಎಲ್ಲರಲ್ಲೂ ಇತ್ತು. ಕೊರೊನಾದಿಂದ ಬಚಾವ್ ಆಗಿದ್ದೇವೆ, ಇನ್ನು ಮಾಮೂಲಿ ಜೀವನ ಮಾಡಬಹುದು ಎಂದೇ ಎಲ್ಲರೂ ಭಾವಿಸಿದ್ದಾರೆ. ಮಾಮೂಲಿ ಜೀವನ ಮಾಡಬಹುದು. ಆದರೆ ಕೊರೊನಾ ಬಗ್ಗೆ ಜಾಗೃತಿ ವಹಿಸಿದರೆ ಮಾತ್ರ. ಯಾಕಂದ್ರೆ ಬೇರೆ ದೇಶಗಳಲ್ಲಿ ಕೊರೊನಾ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಇಷ್ಟು ದಿನ ಮಾಸ್ಕ್ ಹಾಕದೆ, ಸಾಮಾಜಿಕ ಅಂತರವೂ ಇಲ್ಲದೆ ಎಲ್ಲರೂ ಮೈಮರೆತು ಬದುಕುತ್ತಿದ್ದಾರೆ. ಇದು ಕೊರೊನಾ ಹರಡಲು ಸುಲಭ ಮಾರ್ಗ ತೋರಿಸಿದಂತಾಗುತ್ತಿದೆ.
ಸೌತ್ ಆಫ್ರಿಕಾ, ಹಾಂಗ್ ಕಾಂಗ್, ಬೋಟ್ಸಾನಾ ದೇಶಗಳಲ್ಲಿ ಕೊರೊನಾ ಇದ್ದಕ್ಕಿದ್ದ ಹಾಗೆ ಹೆಚ್ಚಳವಾಗಿದೆ. ಅದರಲ್ಲೂ ಹೊಸ ತಳಿ ಹುಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಯಾವಾಗ ಅಲ್ಲಿ ರೂಪಾಂತರಿ ಕೊರೊನಾ ಹೆಚ್ಚಳವಾಯ್ತೋ ಇತ್ತ ಭಾರತದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಮುಂಜಾಗ್ರತ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ, ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಇನ್ನು ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಸಂಬಂಧ ಪತ್ರ ಬರೆದಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರೂಪಾಂತರಿ ವೈರಸ್ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದ್ದಾರೆ.