ಲಕ್ನೋ: ಉತ್ತರ ಪ್ರದೇಶದ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಣ ರಂಗೇರುತ್ತಿದೆ. ಅತ್ತ ಬಿಜೆಪಿ ಪಕ್ಷದಲ್ಲಿ ಪ್ರಮುಖರೆನಿಸಿಕೊಂಡವರು ಇದೇ ಸಮಯಕ್ಕೆ ಪಕ್ಷ ತೊರೆಯುತ್ತಿರುವುದು ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಸುತ್ತೆ ಎಂದುಕೊಂಡರೆ, ಅತ್ತ ಸಿಎಂ ಯೋಗಿ ಆದಿತ್ಯಾನಾಥ್ ಮಾತ್ರ ಏನು ಸಮಸ್ಯೆಯೇ ಆಗಿಲ್ಲವೇನೋ ಎಂಬಂತೆ ಪ್ರಚಾರದಲ್ಲಿ ಭಾಗಿಯಾಗ್ತಾ ಇದ್ದಾರೆ. ಜನರನ್ನ ಮತ್ತೊಮ್ಮೆ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.
ಈ ಬಾರಿ ಯುಪಿ ಚುನಾವಣೆಯಲ್ಲಿ ಗೆಲುವುಗಾಗಿ ಅಖಿಲೇಶ್ ಯಾದವ್ ಪಣ ತೊಟ್ಟಿದ್ದು, ತಮ್ಮ ಎಸ್ಪಿ ಪಕ್ಷಕ್ಕೆ ಬಿಜೆಪಿಯಿಂದ ಸ್ಟ್ರಾಂಗ್ ಕ್ಯಾಂಡಿಟೇಟ್ ಗಳನ್ನ ಕರೆತರುತ್ತಿದ್ದಾರೆ. ಈ ಮಧ್ಯೆ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ 3ನೇ 4 ರಷ್ಟು ಕ್ಷೇತ್ರ ಗೆಲ್ಲುತ್ತೇವೆಂಬ ಹೇಳಿಕೆಗೆ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಅವರು 3ನೇ 4ರಷ್ಟು ಸೀಟು ಗೆಲ್ಲುವ ಬಗ್ಗೆ ಮಾತನಾಡ್ತಿದ್ದಾರೆ. ಅದರರ್ಥ ಅವರು 3 ರಿಂದ 4 ಸೀಟು ಗೆಲ್ಲುವ ಬಗ್ಗೆ ಮಾತನಾಡಿದ್ದಾರೆ. ಮೇಲಿಂದ ಮೇಲೆ ಅವರ ವಿಕೆಟ್ ಗಳು ಬೀಳುತ್ತಿವೆ. ಆದರೂ ಸಹ ನಮ್ಮ ಬಾಬಾ ಮುಖ್ಯಮಂತ್ರಿಗೆ ಕ್ರಿಕೆಟ್ ಆಡೋದಕ್ಕೆ ಬರೋದಿಲ್ಲ. ಉತ್ತರ ಪ್ರದೇಶವನ್ನ ಅವರು ಬರ್ಬಾದ್ ಮಾಡುತ್ತಾರೆ. ಅವರನ್ನು ಕಳುಹಿಸುವುದೇ ಉತ್ತಮ ಎಂದಿದ್ದಾರೆ