ಬಳ್ಳಾರಿ: ಉತ್ತರ ಕರ್ನಾಟಕ ಜಿಲ್ಲೆ ಪ್ರತ್ಯೇಕ ರಾಜ್ಯವಾಗಬೇಕೆಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ದಿವಂಗತ ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ಆಗಾಗ ಮಾತನಾಡುತ್ತಿದ್ದರು. ಇದೀಗ ಸಚಿವ ಆನಂದ್ ಸಿಂಗ್ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ಮಾತನಾಡುತ್ತಿದ್ದಾರೆ.
ನಿನ್ನೆ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ತೆಗೆಯಲಾಗಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ವಿಜಯನಗರ ರಾಜಧಾನಿಯಾಗಲಿದೆ. ವಿಜಯನಗರ ಸಾಮ್ರಾಜ್ಯದ ಗುಣವೇ ಅಂತದ್ದು ಎಂದು ವಿಜಯನಗರ ರಾಜಧಾನಿಯಾಗಲಿದೆ ಎಂದು ಮಾತನಾಡಿದ್ದಾರೆ. ಈ ಹೇಳಿಕೆ ಇದೀಗ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗಿನ ಬಗ್ಗೆ ಧ್ವನಿ ಎತ್ತಿದಂತೆ ಆಗಿದೆ.
ಇತ್ತಿಚೆಗಷ್ಟೆ ವಿಜಯನಗರ ಬಳ್ಳಾರಿಯಿಂದ ಬೇರ್ಪಟ್ಟಿತ್ತು. ಇದರ ಹಿಂದೆ ಸಚಿವ ಆನಂದ್ ಸಿಂಗ್ ಅವರ ಶ್ರಮವೂ ಸಾಕಷ್ಟು ಇದೆ. ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಘೋಷಣೆ ಮಾಡಲಾಗಿದೆ. ಇದೀಗ ಸಚಿವ ಆನಂದ್ ಸಿಂಗ್ ಅವರಿಂದಾನೇ ವಿಜಯನಗರವನ್ನು ರಾಜಧಾನಿ ಮಾಡುವ ಮಾತು ಕೇಳಿ ಬಂದಿದ್ದು, ಚರ್ಚೆಗೆ ಆಸ್ಪದ ನೀಡಿದೆ.